ವಚನ - 1566     
 
ಸುರಿವ ಜಲಕ್ಕೆ ನೆಲ, ಹೊಲೆಯೆಂದು ಪ್ರಮಾಣಿಸಬಹುದೆ? ಉರಿವ ಅನಲಂಗೆ ಶತಡೊಂಕು ಸಸಿನವೆಂಬುದುಂಟೆ? ಗುಹೇಶ್ವರಲಿಂಗಕ್ಕೆ ಲೇಸು ಕಷ್ಟವೆಂಬುದಿಲ್ಲ ಸಂಗನಬಸವಣ್ಣಾ.