ಸೃಷ್ಟಿಯ ಮೇಲಣ ಕಣಿಯ ತಂದು,
ಅಷ್ಟತನುವಿನ ಕೈಯಲ್ಲಿ ಕೊಟ್ಟು,
ಕಟ್ಟಿ ಪೂಜೆಯ ಮಾಡಬೇಕೆಂಬರಯ್ಯಾ.
ಅದೆಂತೆಂದಡೆ: ಭೂಮಿಗೆ ಹುಟ್ಟಿ ಶಿಲೆಯಾದ,
ಕಲ್ಲುಕುಟಿಕನ ಕೈಯಲ್ಲಿ ರೂಪಾದ,
ಗುರುವಿನ ಕೈಯಲ್ಲಿ ಮೂರ್ತಿಯಾದ.
ಇಂತೀ ಮೂವರಿಗೆ ಹುಟ್ಟಿದ ಸೂಳೆಯ ಮಗನ
ನಾನೇನೆಂದು ಪೂಜೆಯ ಮಾಡಲಿ?
ಅದು ಬಿದ್ದಿತ್ತೆಂದು ಸಮಾಧಿಯ
ಹೊಕ್ಕಿಹೆನೆಂಬವನು,
ಅಸ್ತ್ರ ಸಮಾಧಿ ಜಲಾಂತರ
ವನಾಂತರ ದಿಗಂತರದಲ್ಲಿ ಸತ್ತಡೆ
ಕುಂಭಿನಿಪಾತಕ ನಾಯಕನರಕ.
ಕೈಯ ಲಿಂಗ ಹೋದಡೆ
ಮನದ ಲಿಂಗ ಹೋದುದೆ?-ಎಂದು
ಎತ್ತಿಕೊಂಡು, ಅಷ್ಟವಿಧಾರ್ಚನೆ
ಷೋಡಶೋಪಚಾರ ಮಾಡುವುದೆ ವ್ರತವು.
ಇದ ಕಟ್ಟುವ ಭೇದವ, ಮುಟ್ಟುವ ಪಥವ
ಚೆನ್ನಬಸವಣ್ಣನೊಬ್ಬನೆ ಬಲ್ಲನಲ್ಲದೆ
ಮಿಕ್ಕ ಅಭ್ಯಾಸಕ್ಕೆ ಅಗ್ಘವಣಿಯ
ಕೊಟ್ಟು ಪರವನೆಯ್ದಿದೆನೆಂಬ
ಲಜ್ಜಗೇಡಿಗಳನೇನೆಂಬೆ ಗುಹೇಶ್ವರಾ.
Transliteration Sr̥ṣṭiya mēlaṇa kaṇiya tandu,
aṣṭatanuvina kaiyalli koṭṭu,
kaṭṭi pūjeya māḍabēkembarayyā.
Adentendaḍe: Bhūmige huṭṭi śileyāda,
kallukuṭikana kaiyalli rūpāda,
guruvina kaiyalli mūrtiyāda.
Intī mūvarige huṭṭida sūḷeya magana
nānēnendu pūjeya māḍali?
Adu biddittendu samādhiya
hokkihenembavanu,
astra samādhi jalāntara
vanāntara digantaradalli sattaḍe
kumbhinipātaka nāyakanaraka.
Kaiya liṅga hōdaḍe
manada liṅga hōdude?-Endu
ettikoṇḍu, aṣṭavidhārcane
ṣōḍaśōpacāra māḍuvude vratavu.
Ida kaṭṭuva bhēdava, muṭṭuva pathava
cennabasavaṇṇanobbane ballanallade
mikka abhyāsakke agghavaṇiya
koṭṭu paravaneydidenemba
lajjagēḍigaḷanēnembe guhēśvarā.
Hindi Translation सृष्टी के ऊपर का पत्थर लाकर अष्टतनु के हाथ में देकर,
बाँधे पूजा करनी चाहिए कहते अय्या ।
वह कैसे कहें तो - भूमि से पैदा शिला बना,
संगतराशके हाथ से रूप हुआ,
गुरु के हाथ से मूर्ति बना,
ऐसे तीनों के पैदा वेश्या के पुत्र को
मैं क्या कहते पूजा करूँ ?
वह गिरे कहते समाधि में फँसे हुआ कहना
अस्त्र समाधि जलांतर, वनांतर, दिगंतर, में मरे तो,
कुंभिनि पातक नायक नरक ।
हाथ का लिंग गया तो मन का लिंग जायेगा ?-
कहना, उठाकर अष्टविधार्चनषोडषोपचार करना ही व्रत ।
इसे बाँधने का भेद, छूने का पथ
चेन्नबसवण्णा एक ही जानने के बिना
और अभ्यास को पवित्र जल देकर भगवान से मिले कहने
निर्लज्जों को क्या कहूँ गुहेश्वरा?
Translated by: Eswara Sharma M and Govindarao B N