ಸೃಷ್ಟಿ ಮೊದಲವಸಾನ ಕಡೆಯಾಗಿ
ಅರಿವರಿವೆ ಜ್ಞಾನ,
ಅಂತಪ್ಪ ಜ್ಞಾನವೆ ಚಿದ್ಬ್ರಹ್ಮ,
ಆ ಚಿದ್ಬ್ರಹ್ಮ ಚಿದ್ಘನಲಿಂಗ ನೋಡಾ,
ಅದೆಂತೆಂದಡೆ:
``ಸೃಷ್ಟ್ಯಾದ್ಯೈಕ್ಯಾಂತವಿಜ್ಞಾನೇ ಜ್ಞಾನಂಚಾತ್ಮಪ್ರಕಾಶಕಂ|
ತತ್‌ಜ್ಞಾನಂ ಪರಮಂ ಬ್ರಹ್ಮಲಿಂಗಮಿತ್ಯೇವ ಭಾವಯೇತ್||
ಎಂದುದಾಗಿ,
ನಿಮ್ಮನರಿದು ತನ್ನ ಮರೆದ
ಪರಮ ಶಿವಯೋಗಿಗೆ ಪರಿಭವಂಗಳುಂಟೆ ಗುಹೇಶ್ವರಾ?
Transliteration Sr̥ṣṭi modalavasāna kaḍeyāgi
arivarive jñāna,
antappa jñānave cidbrahma,
ā cidbrahma cidghanaliṅga nōḍā,
adentendaḍe:
``Sr̥ṣṭyādyaikyāntavijñānē jñānan̄cātmaprakāśakaṁ|
tatjñānaṁ paramaṁ brahmaliṅgamityēva bhāvayēt||
endudāgi,
nim'manaridu tanna mareda
parama śivayōgige paribhavaṅgaḷuṇṭe guhēśvarā?
Hindi Translation सृष्टि पहले मरती अंत में जाना जाने ज्ञान,
वैसे रहा ज्ञान ही चिद्ब्रह्म, वह चिद्ब्रह्म चिद्घन लिंग देखा ।
वह कैसे कहें तो-
‘सृष्ट्द्वैक्यातविज्ञाने ज्ञानंचात्म प्रकाशकं ।
तत्ज्ञानं परमं ब्रह्म लिंगमित्येवभावयेत्’।
कहने के अनुसार -
तुम्हें जानकर, अपने को भूले
परम शिवयोगी को परिभव है क्या गुहेश्वरा ?
Translated by: Eswara Sharma M and Govindarao B N