ವಚನ - 1585     
 
ಹರಿವ ನದಿಗೆ ಮೈಯೆಲ್ಲ ಕಾಲು. ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ. ಬೀಸುವ ಗಾಳಿಗೆ ಮೈಯೆಲ್ಲ ಕೈ. ಗುಹೇಶ್ವರಾ ನಿಮ್ಮ ಶರಣಂಗೆ, ಸರ್ವಾಂಗವೆಲ್ಲ ಲಿಂಗ!