ಹರಿಹರಿ ಎಂದಡೆ ಹರಿದರಯ್ಯಾ
ಹನ್ನಿಬ್ಬರು ಪರಿಚಾರಕರು.
ಹರಿದು ಬಂದು ಚರಣಕ್ಕೆರಗಿ
ಬಿಜಯಂಗೆಯ್ಸಿ ಎಂದೆನೆ?
ಬಿಜಯಂಗೆಯ್ಯದಿರಲು,
ಕರವಾಳ ಶಿರಕಿಕ್ಕಿ ಸೆಳೆದು ನೋಡಿದರು.
ನಿರವಯಲ ತನು ಖಡ್ಗಕ್ಕೆ ಸಿಲುಕುವುದೆ?
ಹಿರಿಯರಾರೊ? ಕಿರಿಯರಾರೊ?
ಭಕ್ತಿಯ ಸಕೀಲವ ಬಲ್ಲವರಾರೊ?
ಶಿರ ಹೋದ ಬಳಿಕ ಸರವೆಲ್ಲಿಯದೊ?
ಸಬುದವೆಲ್ಲಿಯದೊ?
ಶಿವಶರಣರ ಅಂತರಂಗವನರಿಯದೆ
ಮರುಳಾದನು ನೋಡಾ
ನಮ್ಮ ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನು!
Transliteration Harihari endaḍe haridarayyā
hannibbaru paricārakaru.
Haridu bandu caraṇakkeragi
bijayaṅgeysi endene?
Bijayaṅgeyyadiralu,
karavāḷa śirakikki seḷedu nōḍidaru.
Niravayala tanu khaḍgakke silukuvude?
Hiriyarāro? Kiriyarāro?
Bhaktiya sakīlava ballavarāro?
Śira hōda baḷika saravelliyado?
Sabudavelliyado?
Śivaśaraṇara antaraṅgavanariyade
maruḷādanu nōḍā
nam'ma guhēśvaraliṅgadalli saṅganabasavaṇṇanu!
Hindi Translation हरि हरि कहने से बाहर परिचारक आये अय्या ।
आकर प्रणाम कर पधारिये कहने से
न पधारे तो तलवार शिर पर रखे खींचे देखे ।
निरवलय तन तलवार में फँसेगा ?
कौन बडे? कौन छॊटे? भक्ति का रहस्य कौन जानते ?
शिर जाने के बाद शरीर कहाँ का? ध्वनि कहाँ की ?
शिवशरणों के अंतरंग बिना जाने पागल हुआ देख
हमारे गुहेश्वर लिंग में संगनबसवण्णा।
Translated by: Eswara Sharma M and Govindarao B N