ವಚನ - 1598     
 
ಹಿರಿಯರನೆಲ್ಲ ಹುಟ್ಟಿಸಿದಾತನನರಿಯಿರೊ, ಹಿರಿಯರ ಮಕ್ಕಳಿರಾ? ಇಂದು ಎಂದೇನೊ? ನಾಳೆ ಎಂದೇನೊ? ಎಂದೂ ಒಂದೇ ಮಕ್ಕಳಿರಾ? ಗುಹೇಶ್ವರಲಿಂಗ ಹಂಗಿಲ್ಲದ ಸಂಯೋಗ ಇದ ಬೇಗನರಿಯಿರೊ ಹಿರಿಯರ ಮಕ್ಕಳಿರಾ.