ವಚನ - 1599     
 
ಹುಟ್ಟು ಬಂಜೆಯ ಮಗನೊಬ್ಬ ಈಯದೆಮ್ಮೆಯ ಗಿಣ್ಣವ ಬೇಡಿದನು. ಕೊಂಬಿಲ್ಲದ ಮರನನೇರಿ ಹೊಟ್ಟೆ ತುಂಬ ಹಣ್ಣ ಮೆಲಿದನು. ಗುಹೇಶ್ವರ ಗುಹೇಶ್ವರ ಇಳಿ ಇಳಿ ಎಂದಡೆ ಅಳತ್ತೈದಾನೆ!