ಘನವಪ್ಪ ಬೋನವನು ಒಂದು
ಅನುವಿನ ಪರಿಯಾಣದಲ್ಲಿ ಹಿಡಿದು,
ಗುರುಲಿಂಗಜಂಗಮಕ್ಕೆ ಆರೋಗಣೆಯ ಮಾಡಿ ಮಿಕ್ಕುದು ಪ್ರಸಾದ.
ಈ ತೆರೆದ ಘನವಪ್ಪ ಲಿಂಗವನು ಒಂದನುವಿನಲ್ಲಿ ತಂದಿರಿಸಿ,
ಘನವಪ್ಪ ಬೋನವನು ಲಿಂಗವಾರೋಗಣೆಯ ಮಾಡಿ,
ಮಿಕ್ಕುದ ಕೊಳ್ಳಬಲ್ಲಡೆ ಪ್ರಸಾದಿ.
ಇಂತೀ ತೆರನ ಬೆಸಗೊಳ್ಳಬಲ್ಲಡೆ,
ಎನ್ನ ಬೆಸಗೊಳ್ಳೈ ಗುಹೇಶ್ವರಾ.
Hindi Translationश्रेष्ठ नैवेद्य को योग्य थाल में रखकर,
गुरुलिंगारोगण करके बचा प्रसाद है।
इस तरह का श्रेष्ठ लिंग को योग्य रीति में रखकर,
श्रेष्ठ नैवेद्य को लिंगावारोगण कर
बचा आहार प्रसादी है।
इस तरह कहें तो,
मुझे अपनाओ गुहेश्वरा।
Translated by: Eswara Sharma M and Govindarao B N
English Translation
Tamil Translationபரந்தகன்ற உலகினைப் படையலாக
முறையாகத் தாம்பாளத்தில் இருத்தி,
இஷ்டலிங்கத்திற்குப் படைத்து, பிரசாதமாக ஏற்கிறான்.
இத்தகு இஷ்டலிங்கத்தை மனத்தில் நிலை நிறுத்தி,
மேன்மையான உலகத்தையே இலிங்கத்திற்குப் படைத்து,
இவ்விதம் நடந்துகொள்ள வேண்டுமெனும் விருப்பம் இருப்பின்
என்னை வினவுவாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಸಾದಿಸ್ಥಲ
ಶಬ್ದಾರ್ಥಗಳುಇಂತೀ ತೆರನ = ಈ ಮೇಲೆ ಹೇಳಲಾದ ಅಪೂರ್ವ ಪ್ರಸಾದ ತತ್ವ್ತವನ್ನು; ಈ ತೆರದ ಘನವಪ್ಪ ಲಿಂಗ = ಈ ರೀತಿ ಘನವಪ್ಪ ವಿಶ್ವಬೋನವನ್ನೇ ಸವಿದ ಗುರುದತ್ತ ಇಷ್ಟಲಿಂಗ; ಎನ್ನ ಬೆಸಗೊಳ್ಳೈ = ನನ್ನನ್ನು ಕೇಳಿ; ಘನ = ಪೂರ್ಣ, ಸುವಿಶಾಲ; ಬೆಸಗೊಳ್ಳ ಬಲ್ಲಡೆ = ಕೇಳಿ, ತಿಳಿದು, ಆಚರಿಸಿ, ಅನುಭವಿಸಬೇಕೆಂಬ ಹಂಬಲವಿದ್ದರೆ; Written by: Sri Siddeswara Swamiji, Vijayapura