•  
  •  
  •  
  •  
Index   ವಚನ - 174    Search  
 
ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ, ಬಯಲ ಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ, ಬರಿದೆ ಬಹುದೆ ಶಿವಜ್ಞಾನ? ಷಡುವರ್ಗವಳಿಯದನ್ನಕ್ಕ, ಬರಿದೆ ಬಹುದೆ? ಅಷ್ಟಮದವಳಿಯದನ್ನಕ್ಕ ಬರಿದೆ ಬಹುದೆ ಶಿವಸಂಪದವು? ಮದಮತ್ಸರ ಮಾಡಲಿಲ್ಲ, ಹೊದಕುಳಿಗೊಳಲಿಲ್ಲ, ಗುಹೇಶ್ವರಲಿಂಗ ಕಲ್ಪಿತದೊಳಗಿಲ್ಲ.
Transliteration Kadaḷiya banava hokku holaba tiḷiyadannakka, bayala gāḷiya hiḍidu gaṭṭi māḍadannakka, baride bahude śivajñāna? Ṣaḍuvargavaḷiyadannakka, baride bahude? Aṣṭamadavaḷiyadannakka baride bahude śivasampadavu? Madamatsara māḍalilla, hodakuḷigoḷalilla, guhēśvaraliṅga kalpitadoḷagilla.
Hindi Translation कदली बन घुसकर लौटने का मार्ग न जानने तक, मैदान की वायु पकड घन न करने तक, सिर्फ आता है शिवज्ञान ? षड्वर्ग खोने तक सिर्फ आता है ? अष्टमद दूर न करने तक, मद मत्सर न किया, दु:ख नाश नहीं होगा। गुहेश्वरा सिर्फ कल्पित नहीं है। Translated by: Eswara Sharma M and Govindarao B N
Tamil Translation கதலீவனத்தில் நுழைந்து வழியை அறியும்வரை, சூட்சும பிராணனை பயிற்சி செய்து மனத்தை நிலைநிறுத்தாத வரையில் சிவஞானம் கைகூடுமோ? அறுபிரமைகள் அழியும் வரையில் கைகூடுமோ? எண்மதங்கள் அழியும் வரையில் கைகூடுமோ? செருக்கு பொறாமையில்லை, துன்பம், துயரமில்லை குஹேசுவரலிங்கம் கற்பிக்கப்பட்டதில் இல்லை. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕದಳಿ = ಇದು ದೇಹದ ಸಂಕೇತ; ಕಲ್ಪಿತ = ಮೊದಲಿಲ್ಲದೆ ಕಾಣಬಂದುದು, ಕೇವಲ ತೋರಿಕೆಯಾದುದು, ಸತ್ಯವಲ್ಲದ್ದು; ಬಯಲ ಗಾಳಿ = ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ ಚಲನಶೀಲ ಪ್ರಾಣ; Written by: Sri Siddeswara Swamiji, Vijayapura