Index   ವಚನ - 180    Search  
 
ಅಸ್ಥಿಗೆ ಚರ್ಮವಾಧಾರವಾಗಿ, ಪ್ರಾಣಕ್ಕೆ ಪ್ರಸಾದ ಮೃತ್ತಿಕೆಯಾಗೆ ಪ್ರಾಣಲಿಂಗಸಂಬಂಧವಲ್ಲ ನಿಲ್ಲಿಭೋ! ಪ್ರಾಣಲಿಂಗಸಂಬಂಧವೆಂಬುದು ಕರಕಷ್ಟ ನೋಡಾ. ಪ್ರಾಣಲಿಂಗಸಂಬಂಧವೆಂಬುದು ಕರ ನಾಚಿಕೆ ನೋಡಾ. ಒಡೆದ ಮಡಕೆಗೆ ಒತ್ತಿ ಮಣ್ಣಮೆತ್ತಿದಡೆ, ಅದು ತರಹರವಾಗಬಲ್ಲುದೆ ಗುಹೇಶ್ವರಾ?