•  
  •  
  •  
  •  
Index   ವಚನ - 20    Search  
 
ಭೂಮಿಯಾಕಾಶ ಒಂದು ಜೀವನದುದರ. ಅಲ್ಲಿ ಘನವೇನು ಘನವೆನ್ನದವಂಗೆ? ಕಿರಿದೇನು ಕಿರಿದೆನ್ನದವಂಗೆ? ಆ ಘನವು ಮನಕ್ಕೆ ಗಮಿಸಿದಡೆ, ಇನ್ನು ಸರಿಯುಂಟೆ ಗುಹೇಶ್ವರಾ?
Transliteration Bhūmiyākāśa ondu jīvanadudara. Alli ghanavēnu ghanavennadavaṅge? Kiridēnu kiridennadavaṅge? Ā ghanavu manakke gamisidaḍe, innu sariyuṇṭe guhēśvarā?
Music Courtesy:
Hindi Translation भूमि आकाश एक जीव के दो रूप; घन न माननेवाले का घन क्या है? छोटा न माननेवाले का छोटा क्या है ? वह घन मन में गमन करें तो फिर सही है क्या गुहेश्वरा ? Translated by: Eswara Sharma M and Govindarao B N
Tamil Translation பூமியும் ஆகாயமும் ஓரிருப்பின் இரு தோற்றங்கள் அறிந்தவனுக்கு சிவன் மேன்மையானவனோ? அறிந்தவனுக்கு ஜீவன் கீழானவனோ? பரம் மனத்தில் நிறைந்திருப்பின் இதற்கு இணை உண்டோ குஹேசுவரனே? Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಕಾಶ = ಇದು ಸೂಕ್ಷ್ಮತತ್ವ್ತ ಬಯಲಸ್ವರೂಪನಾದ ಶಿವನ ಸಂಕೇತ; ಒಂದು ಜೀವನದುದರ = ಒಂದೇ ಪರಮಸತ್ಯ(ಅಸ್ತಿತ್ವ)ದ ಎರಡು ರೂಪುಗಳು ಇವು ಜೀವ ಮತ್ತು ಶಿವ; ಘನ = ಪರವಸ್ತು; ಭೂಮಿ = ಜಡವಾದ ಸ್ಥೂಲದೇಹಾಭಿಮಾನಿಯಾದ ಜೀವಾತ್ಮನ ಸಂಕೇತ; Written by: Sri Siddeswara Swamiji, Vijayapura