ಅಂಗದಲ್ಲಿ ಮಾಡುವ ಸುಖ,
ಲಿಂಗಕ್ಕದು ಭೂಷಣವಾಯಿತ್ತು.
ಕಾಡುಗಿಚ್ಚಿನ ಕೈಯಲ್ಲಿ ಕರಡ ಕೊಯಿಸುವಂತೆ-
ಹಿಂದೆ ಮೆದೆಯಿಲ್ಲ ಮುಂದೆ ಹುಲ್ಲಿಲ್ಲ.
ಅಂಗ ಲಿಂಗವೆಂಬನ್ನಕ್ಕರ ಫಲದಾಯಕ.
ಲಿಂಗೈಕ್ಯವದು ಬೇರೆ ಗುಹೇಶ್ವರಾ.
Transliteration Aṅgadalli māḍuva sukha,
liṅgakkadu bhūṣaṇavāyittu.
Kāḍugiccina kaiyalli karaḍa koyisuvante-
hinde medeyilla munde hullilla.
Aṅga liṅgavembannakkara phaladāyaka.
Liṅgaikyavadu bēre guhēśvarā.
Hindi Translation अंग में करनेवाली पूजा लिंग को भूषण हुआ।
दावानल के हाथ से घास कटवाने जैसे
पीछे ढेर नहीं, आगे घास नहीं।
अंगलिंग कहने से फलदायक;
लिंगैक्य अलग है गुहेश्वरा।
Translated by: Eswara Sharma M and Govindarao B N
Tamil Translation கையிலுள்ள இலிங்கத்தைப் பூஜித்து எய்தும்,
மகிழ்வை இலிங்கம் ஏற்கிறது.
காட்டுத்தீ உலர்ந்த புல்லைத் தீண்டின்,
முன்பிருந்த புற்கட்டுமில்லை, அதன்பின்பும் புல்லில்லை.
இஷ்டலிங்கத்தைப் பூஜிப்பவன் பயனடைகிறான்.
இலிங்கத்துடனிணைந்தோனுக்கு வேறு பயனில்லை குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗದಲ್ಲಿ ಮಾಡುವ ಸುಖ = ಕರಸ್ಥಲದಲ್ಲಿ ಲಿಂಗವಿರಿಸಿ ಮನಸಾರೆ ಅರ್ಚಿಸಿ, ಪಡಿಪದಾರ್ಥಗಳನ್ನು ಅರ್ಪಿಸಿ, ಅವುಗಳನ್ನೆ
ಲಿಂಗಪ್ರಸಾದವೆಂದು ಸ್ವೀಕರಿಸಿ; ಕರಡ = ಒಣಗಿದ ಕಾಡುಹುಲ್ಲು; ಲಿಂಗಕ್ಕದು ಭೂಷಣ = ಲಿಂಗಕ್ಕೆ ಸಮ್ಮತ;
Written by: Sri Siddeswara Swamiji, Vijayapura