ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವಾ.
ಆತನ ಕಂಡು ಬೆರಗಾದೆನವ್ವಾ.
ಎನ್ನಂತರಂಗದ ಆತುಮನೊಳಗೆ
ಅನುನಿಮಿಷ ನಿಜೈಕ್ಯ ಗುಹೇಶ್ವರನ ಕಂಡು!
Transliteration Enna manada koneya moneya mēle
aṅgavillada rūpana kaṇḍu maruḷādenavvā.
Ātana kaṇḍu beragādenavvā.
Ennantaraṅgada ātumanoḷage
anunimiṣa nijaikya guhēśvarana kaṇḍu!
English Translation 2 On the tip of my mind
I have seen with amaze
A bodiless form!
In the inmost recesses of my soul
I have seen with amaze
Allayya, Guheśvara's own,
Become
One with Animişa!
Hindi Translation मेरे मन के अंतिम नोक पर
अंगरहित रूप देखकर आकर्षित हुई।
उसे देखकर चकित हुई,
मेरे अंतरंग की आत्मा में
अनिमिष निजैक्य गुहेश्वर को देखा।
Translated by: Eswara Sharma M and Govindarao B N
Tamil Translation மனமொடுங்கிய மனமற்ற நிலையில்
உறுப்பற்ற வடிவைக் கண்டு மருளானேன்
அவனைக் கண்டு வியப்பெய்தினேன்
என் அகத்திலே ஆன்மாவினுள்ளே
தன்னில் தானே நிலைத்துள்ள குஹேசுவரனைக் கண்டேன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗವಿಲ್ಲದ = ನಿರವಯವವಾದ.; ಅಂತರಂಗ = ಹೃದಯಾಂತರಂಗ.; ಅನಿಮಿಷ = ನಿಶ್ಚಲ; ಆತುಮನೊಳಗೆ = ತನ್ನೊಳಗೆ.; ನಿಜೈಕ್ಯ = ಸ್ವಾತ್ಮನಿಷ್ಠ,ತನ್ನಲ್ಲಿ ತಾನು ನೆಲೆಸಿರುವ; ಮನದ ಕೊನೆಯ ಮೊನೆ = ಸಂಚಲನವೆಲ್ಲ ಕೊನೆಗೊಂಡ ನಿಶ್ಚಲ ಮನಸ್ಸಿನ ಮೇರುಸ್ಥಿತಿ.; ರೂಪನ = ಪರಮಾತ್ಮಸ್ವರೂಪನ,ಪ್ರಾಣ ಲಿಂಗದೇವನ.;
Written by: Sri Siddeswara Swamiji, Vijayapura