•  
  •  
  •  
  •  
Index   ವಚನ - 216    Search  
 
ಉದಯ ಮುಖದಲ್ಲಿ ಪೂಜಿಸ ಹೋದರೆ, ಹೃದಯ ಮುಖದಲ್ಲಿ ಕತ್ತಲೆಯಾಯಿತ್ತು, ಹಾರಿ ಹೋಯಿತ್ತು ಪ್ರಾಣಲಿಂಗ, ಹರಿದು ಬಿದ್ದಿತ್ತು ಸೆಜ್ಜೆ. ಕಟ್ಟುವ ಬಿಡುವ ಸಂಬಂಧಿಗಳ ಕಷ್ಟವ ನೋಡಾ ಗುಹೇಶ್ವರಾ.
Transliteration Udaya mukhadalli pūjisa hōdare, hr̥daya mukhadalli kattaleyāyittu, hāri hōyittu prāṇaliṅga, haridu biddittu sejje. Kaṭṭuva biḍuva sambandhigaḷa kaṣṭava nōḍā guhēśvarā.
Hindi Translation उदय मुँह में पूजा करने गये तो ह्रदय मुँह में अंधेरा हुआ। उडकर गया प्राणलिंग, तुड़कर गिराशय्या ! बांधना-छोड़ना संबंधियों का कष्ट देखो गुहेश्वरा? Translated by: Eswara Sharma M and Govindarao B N
Tamil Translation புறத்திலுள்ள இலிங்கத்தைப் பூஜித்தால் இதயத்தில் இருள் சூழ்கிறது பறந்தது பிராணலிங்கம், வீழ்ந்தது பேழை கட்டுவோர் அகற்றுவோர் தம் துயரத்தைக் காணாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಉದಯಮುಖ = ದೃಷ್ಟಿಗೋಚರವಾದ ದೃಷ್ಟಲಿಂಗ; Written by: Sri Siddeswara Swamiji, Vijayapura