ಸೃಷ್ಟಿಯ ಮೇಲಣ ಕಣಿಯ ತಂದು,
ಅಷ್ಟತನುವಿನ ಕೈಯಲ್ಲಿ ಕೊಡಲು,
ಅಷ್ಟತನು ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ-ಕೆಟ್ಟನಲ್ಲಾ,
ಅನಾಚಾರಿಯೆಂದು ಮುಟ್ಟರು ನೋಡಾ,
ಮುಟ್ಟದ ಭೇದವನು, ವಿಖಂಡಿಸಿದ ಭಾವವನು;
ಭಾವವ್ರತಗೇಡಿಗಳು ತಾವೆತ್ತ ಬಲ್ಲರು ಗುಹೇಶ್ವರಾ?
Transliteration Sr̥ṣṭiya mēlaṇa kaṇiya tandu,
aṣṭatanuvina kaiyalli koḍalu,
aṣṭatanu tappi sr̥ṣṭiya mēle biddaḍe-keṭṭanallā,
anācāriyendu muṭṭaru nōḍā,
muṭṭada bhēdavanu, vikhaṇḍisida bhāvavanu;
bhāvavratagēḍigaḷu tāvetta ballaru guhēśvarā?
Hindi Translation सृष्टि के ऊपर का पत्थर लाकर
अष्टतनु के हाथ में दिये तो,
अष्टतनु फिसलकर सृष्टि के ऊपर गिरे तो बिगड़ा।
अनाचारी कहके स्पर्श नहीं करते देखो।
स्पर्श के भेद को अलग करने के भाव को
भाव व्रतभंगी आप क्या जानते हैं गुहेश्वरा?
Translated by: Eswara Sharma M and Govindarao B N
Tamil Translation பூமியின் மீதுள்ள கல்லைக் கொணர்ந்து
எட்டுத் தத்துவ உடலையுடையவனின் கையில் அளிப்பின்
கையிலிருந்து தவறி பூமியின் மீது வீழின் கெட்டேனன்றோ
நியமம் தவறியவன் என தீண்டார் காணாய்!
தொடுதல் குறித்த ஞானம், வேறுபட்ட உணர்வை
உணர்வற்ற நோன்பிலிகள் எங்ஙனமறிவர் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಷ್ಟತನುವಿನ = ಭೂಮಿ, ಜಲ, ತೇಜ, ಅನಿಲ, ಅಂಬರ, ಸೋಮ, ಸೂರ್ಯ ಮತ್ತು ಆತ್ಮ ಅಥವಾ
ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಅಹಂಕಾರ, ಬುದ್ದ; ಕಣಿಯ ತಂದು = ಶಿಲೆಯ ತಂದು; ಕೈಯಲ್ಲಿ ಕೊಡಲು = ಕರಸ್ಥಲದಲ್ಲಿ ಕರುಣಿಸಲಾಗಿ; ಭಾವವ್ರತಗೇಡಿಗಳು = ಲಿಂಗದ ನಿಜವಾದ "ಭಾವ'ವಿಲ್ಲದ, "ಜ್ಞಾನ'ವಿಲ್ಲದ ಜನರು; ಮುಟ್ಟದ ಭೇದ = ಮುಟ್ಟದ ಬಗೆ; ಯಾವುದನ್ನು ಮುಟ್ಟಬಾರದು? ಯಾವುದು ಮುಟ್ಟಲು ಯೋಗ್ಯ? ಎಂಬುದರ ಜ್ಞಾನ; ವಿಖಂಡಿಸಿದ ಭಾವ = ಬೇರ್ಪಡಿಸಿದ ಭಾವ, ಅಗಲಿದ ಭಾವ. ಯಾವುದರಿಂದ ಅಗಲಬಾರದು ಮತ್ತು ಅಗಲಬರದು ಎಂಬುದರ ಜ್ಞಾನ; ಸೃಷ್ಟಿಯ ಮೇಲಣ = ಭೂಮಿಯ ಮೇಲಿನ;
Written by: Sri Siddeswara Swamiji, Vijayapura