Index   ವಚನ - 237    Search  
 
ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ, ದೇಹ ದಹನವಾಗಲಾಗದು, ನಿಕ್ಷೇಪಿಸದೆ ಇರಲಾಗದು ಸಂಸಾರಸಂಗದ ಕಷ್ಟವ ನೋಡಾ! ಅನಾಹತದಲ್ಲಿ ನಿರೂಪ ಸ್ವಾಯತ, ಗುಹೇಶ್ವರಾ, ನಿಮ್ಮ ಶರಣರಂತಹರಿಂತಹರೆಂದಡೆ, ನಾಯಕನರಕ.