•  
  •  
  •  
  •  
Index   ವಚನ - 238    Search  
 
ಹರಿಯ ಬಾಯ ಹಾಲು, ಉರಿಯ ಕೈಯ ಬೆಣ್ಣೆ, ಗಿರಿಯ ಮೇಲಣ ಶಿಶು ಹರಿದಾಡುತ್ತಿದೆ. ಕರೆಯಿಂ ಭೋ ಹಾಲುಗುಡಿ[ಯೆ]. ಸುರಪತಿಯ ಗಜವೇರಿ ಮರಳಿ ಹೋಹನ ಕಂಡು ಕರೆಯಿಂ ಭೋ. ಹರನ ಮಂತಣಿಯ ಶೂಲದಲ್ಲಿ, ಶಿರದಲುಂಗುಟ ಊರಿ, ನೆರೆವುತ್ತಿರ್ದುದ ನಾನೇನೆಂಬೆ ಗುಹೇಶ್ವರಾ.
Transliteration Hariya bāya hālu, uriya kaiya beṇṇe, giriya mēlaṇa śiśu haridāḍuttide. Kareyiṁ bhō hāluguḍi[ye]. Surapatiya gajavēri maraḷi hōhana kaṇḍu kareyiṁ bhō. Harana mantaṇiya śūladalli, śiradaluṅguṭa ūri, nerevuttirduda nānēnembe guhēśvarā.
Hindi Translation ऐंद्रिय सुख दूध जैसे , शब्दादि सुख माखन जैसे । शिवतत्व का शिशु फिर रहा है, निसंसार जैसे दूध पीने बुलाओ। सुरपति गज चढकर फिर जाना देखकर बुलाओ। शिवऽहं नोक पर शिव प्रज्ञा प्राप्त कर आनंदित हुए को मैं क्या कहूँ गुहेश्वरा? Translated by: Eswara Sharma M and Govindarao B N
Tamil Translation புலனின்ப மெனும்பால், காலனின் கையில்வெண்ணெய் மலையின் மீதுள்ள குழந்தை மகிழ்ந்தாடுகிறது பாலை அருந்துவதற்கு அழைப்பாய் இந்திரனின் யானைமீதேறிச் சென்றவனைக்கண்டு பாலை அருந்துவதற்கு அழைப்பாய் அகத்தில் சிவோகம் எனும் உணர்வில் தோய்ந்து சிவானுபவத்தில் மூழ்கித் துய்த்ததை நான் என்னென்பேன் குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಂಗುಟ ಊರಿ = ಏರಿ; ಉರಿ = ಕಾಲ; ಗಜ = ಆ ಭೋಗ ವೈಭವಗಳಿಂದ ಉಂಟಾಗುವ ಉನ್ಮಾದದ ಸಂಕೇತ; ಗಿರಿ = ಶಿವತತ್ವ್ತ; ನೆರೆ = ಬೆರೆತು ಆನಂದಿಸು; ಬೆಣ್ಣೆ = ಮೋಹಕವಾದ ಶಬ್ದಾದಿ ವಿಷಯಗಳು; ಶಿರ = ಶಿವಪ್ರಜ್ಞೆ; ಶಿಶು = ಜೀವ; ಶೂಲ = ಆ ಮನದ ಅಗ್ರಭಾಗ ; ಸುರಪತಿ = ಭೋಗ ಹಾಗೂ ವೈಭವದ ಸಂಕೇತ; ಹರನ ಮಂಥಣಿ = ಶಿವೋSಹಂ ಭಾವಸ್ಪಂದನೆಯಲ್ಲಿ ರತವಾದ ವಿಶುದ್ದ ಮನಸ್ಸು; ಹರಿ = ಇಂದ್ರಿಯ; ಹರಿದಾಡು = ವ್ಯವಹರಿಸು; ಓಡಾಡು; ಹಾಲು = ಸುಖ; Written by: Sri Siddeswara Swamiji, Vijayapura