ವಚನ - 257     
 
ಅಷ್ಟಾಂಗಯೋಗದಲ್ಲಿ; ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ[ವೆಂಬ] ಧಾನ್ಯ ಧಾರಣ ಸಮಾಧಿ[ಯೆಂಬ], ಎರಡು ಯೋಗ[ವುಂಟು], ಅಲ್ಲಿ ಅಳಿದು ಕೂಡುವುದೊಂದು ಯೋಗ, ಅಳಿಯದೆ ಕೂಡುವುದೊಂದು ಯೋಗ. ಈ ಎರಡು ಯೋಗದೊಳಗೆ, ಅಳಿಯದೆ ಕೂಡುವ ಯೋಗವು ಅರಿದು ಕಾಣಾ ಗುಹೇಶ್ವರಾ.