ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ ನಿಲವು,
ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ.
ಬಯಲ ಹಿರಿಯರು ಬಯಲನೆ ಅರಸುವರು.
ಅಲ್ಲಿ ಉಂಟೆ ಹೇಳಾ ಗುಹೇಶ್ವರಾ?
Transliteration Khaṇḍākhaṇḍa sanyōgavillada akhaṇḍitana nilavu,
tannalli allade mattelliyū illa.
Bayala hiriyaru bayalane arasuvaru.
Alli uṇṭe hēḷā guhēśvarā?
Hindi Translation देह और जीव का संयोग रहित अखंडित की स्थिति
अपने में ही और कहीं नहीं ।
माया बंधित बुजुर्ग माया को ही ढूँढते हैं।
वहाँ गुहेश्वर है क्या बताओ?
Translated by: Eswara Sharma M and Govindarao B N
Tamil Translation உடலுடன் தொடர்பற்ற முழுமுதற்பொருள்
தன்னிடம் நிலைபெற்றுளதன்றி வேறெங்குமிலை
நிலையற்ற உலகை நயந்துபெரியோர் அங்கேயே தேடுவர்
அங்கு கிடைக்குமோ, கூறுவாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಖಂಡ = ನಿರವಯವ, ಜೀವ; ಅಖಂಡಿತ = ಪರಿಪೂರ್ಣವಸ್ತು, ಪರವಸ್ತು; ಖಂಡ = ಸಾವಯವ, ದೇಹ ಇತ್ಯಾದಿ; ಬಯಲು = ಸತ್ವರಹಿತವಬಾದುದು, ಸಾರರಹಿತವಾದುದು, ಬಾಳಿಕೆ ಇಲ್ಲದುದು, ನಶ್ವರ ಜಗತ್ತು;
Written by: Sri Siddeswara Swamiji, Vijayapura