ನಾಭಿಮಂಡಲದ ಉದಯವೆ ಉದಯ.
ಮಧ್ಯನಿರಾಳದ ನಿಲವಿನ ಪರಿಯ ನೋಡಾ!
ಪವನಶೂಲದ ಮೇಲೆ ಪರಿಣಾಮವಯ್ಯಾ.
ಊರ್ಧ್ವಮುಖದಲ್ಲಿ ಉದಯವಾಯಿತ್ತ ಕಂಡೆ.
ಮಿಂಚುವ ತಾರಕೆ ಇದೇನೊ ಗುಹೇಶ್ವರಾ.
Transliteration Nābhimaṇḍalada udayave udaya.
Madhyanirāḷada nilavina pariya nōḍā!
Pavanaśūlada mēle pariṇāmavayyā.
Ūrdhvamukhadalli udayavāyitta kaṇḍe.
Min̄cuva tārake idēno guhēśvarā.
Hindi Translation नाभि मंडल का उदय ही उदय ।
मध्यनिराली स्थिति का रूप देखो।
पवनशूल पर परिणाम है।
ऊर्ध्व मुख में उदित हुआ देखा,
चमकते तारे यह क्या है गुहेश्वरा ?
Translated by: Eswara Sharma M and Govindarao B N
Tamil Translation நாபி மண்டலத்தின் உதயமே உதயம்
நடுவிலுள்ள சுழுமுனையின் நிலையைக் காணாய்!
பிரம்மரந்திரத்தில் நிலவும் விளைவு ஐயனே.
ஸஹஸ்ராரத்தில் உதயமானதைக் கண்டேன்
ஒளிரும் நட்சத்திரம்! இது என்ன குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಉದಯ = ಯೋಗದ ಆರಂಭ ಸ್ಥಿತಿ; ಊರ್ಧ್ವಮುಖ = ಬ್ರಹ್ಮರಂಧ್ರಕ್ಕೆ ಹೊಂದಿಕೊಂಡಿರುವ ಸಹಸ್ರಾರ ಮಂಡಲ, ಊರ್ಧ್ವ ಮುಖಮಂಡಲ; ನಾಭಿಮಂಡಲ = ಪ್ರಾಣಶಕ್ತಿಯ ಕೇಂದ್ರ; ಪವನಶೂಲ = ಪವನವು ಕೊಟ್ಟಕೊನೆಯಲ್ಲಿ ನಿಶ್ಚಲಗೊಳ್ಳುವ ತಾಣ; ಮಧ್ಯನಿರಾಳ = ಮಧ್ಯನಾಳವೆನಿಸುವ ಸುಷುಮ್ನೆ. ಆ ನಾಳದೊಳಗಿರುವ ವಿವರ(ಪೊಳ್ಳು) ಪ್ರಶಾಂತ ನಿರಾಳ;
Written by: Sri Siddeswara Swamiji, Vijayapura