•  
  •  
  •  
  •  
Index   ವಚನ - 284    Search  
 
ಆಡು ಮಂದರಗಿರಿಯ ಕೋಡು, ಬ್ರಹ್ಮನ ಶಿಖಿಯ ಬೇಡಿತ್ತನೀವ ವರದಾನಿಯನೇನೆಂಬೆನು? ಆಡುತ್ತಾಡುತ್ತ ಅನಲನುರಿದು ಎರಡೊಂದಾದ ಪರಿಯ ನೋಡ! ನೋಡುತ್ತ ನೋಡುತ್ತ ಅನಲನಲ್ಲಿಯೆ ಅರಿತು ಕೂಡಿದ ಮಹಾಘನವನೇನೆಂಬೆನು ಗುಹೇಶ್ವರಾ?
Transliteration Āḍu mandaragiriya kōḍu, brahmana śikhiya bēḍittanīva varadāniyanēnembenu? Āḍuttāḍutta analanuridu eraḍondāda pariya nōḍa! Nōḍutta nōḍutta analanalliye aritu kūḍida mahāghanavanēnembenu guhēśvarā?
Hindi Translation वह मंदर गिरि की चोटी , ब्र्ह्मशिखि , इच्छुक याचक के वरदानी को क्या कहूँ ? खेलते खेलते अनल जलते दोनों एक होने की स्थिति देखो। देखते देखते अनल में पूर्ण रूप से एक हुआ महाघन को क्या कहूँ गुहेश्वरा ? Translated by: Eswara Sharma M and Govindarao B N
Tamil Translation மந்தரமலையின் துதியில் பிரம்மமண்டலம் வேண்டியதை ஈயும் வரம் ஈவோனை என்னென்பேன்? அசைந்தசைந்து அனலன் முறையாக சாதனை செய்து இரண்டு ஒன்றான முறையைக் காணாய்! கண்டு கண்டு அனலன் அங்கேயே உணர்ந்து கூடிய மேன்மை நிறைந்ததை என்னென்பேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಲನು = ಶರಣನು; ಅರತು ಕೂಡಿದ = ಪೂರ್ಣ ಬೆರೆತುಹೋದ, ಮಹಾಘನ ಲಿಂಗವೇ ಆದ; ಅಲ್ಲಿಯೆ = ಆ ಪ್ರಾಣಲಿಂಗದಲ್ಲಿಯೆ; ಕೋಡು = ಆ ಮನದ ಕೊನೆ; ನೋಡುತ್ತ ನೋಡುತ್ತ = ಕ್ಷಣಮಾತ್ರದಲ್ಲಿಯೆ; ಬ್ರಹ್ಮಶಿಖಿ = ಬ್ರಹ್ಮನಾಳದ ಅಗ್ರಭಾಗ; ಮಂದರಗಿರಿ = ಧ್ಯಾನಮಂಥನಶೀಲವಾದ ಮನಸ್ಸು; Written by: Sri Siddeswara Swamiji, Vijayapura