•  
  •  
  •  
  •  
Index   ವಚನ - 283    Search  
 
ಆಧಾರದಲ್ಲಿ ಅಭವನು ಸ್ವಾಯತ, ಸ್ವಾದಿಷ್ಠಾನದಲ್ಲಿ ರುದ್ರನು ಸ್ವಾಯತ, ಮಣಿಪೂರಕದಲ್ಲಿ ಮೃಡನು ಸ್ವಾಯತ, ಅನಾಹತದಲ್ಲಿ ಈಶ್ವರನು ಸ್ವಾಯತ, ವಿಶುದ್ಧಿಯಲ್ಲಿ ಸದಾಶಿವನು ಸ್ವಾಯತ. ಆಜ್ಞಾಚಕ್ರದಲ್ಲಿ ಶಾಂತ್ಯಾತೀತನು ಸ್ವಾಯತ. ಗುಹೇಶ್ವರಲಿಂಗವು, ವ್ಯೋಮ ವ್ಯೋಮವ ಕೂಡಿದಂತೆ!
Transliteration Ādhāradalli abhavanu svāyata, svādiṣṭhānadalli rudranu svāyata, maṇipūrakadalli mr̥ḍanu svāyata, anāhatadalli īśvaranu svāyata, viśud'dhiyalli sadāśivanu svāyata. Ājñācakradalli śāntyātītanu svāyata. Guhēśvaraliṅgavu, vyōma vyōmava kūḍidante!
Hindi Translation आधार में अभव स्वायत। स्वाधिष्टान में रुद्र स्वायत। मणिपूरक में मृड स्वायत। अनाहत में ईश्वर स्वायत। विशुद्धि में सदाशिव स्वायत। आज्ञाचक्र में शांतातीत स्वायत। गुहेश्वर लिंग व्योम में व्योम मिला जैसे ! Translated by: Eswara Sharma M and Govindarao B N
Tamil Translation மூலாதாரத்தில் பிரம்மன் நிலைகொண்டுளன். சுவாதிஷ்டானத்தில் விஷ்ணு நிலைகொண்டுளன். மணிபூரகத்தில் மிருடன் நிலைகொண்டுளன். அனாஹகத்தில் ஈசுவரன் நிலை கொண்டுளன். விசுத்தியில் சதாசிவன் நிலை கொண்டுளன். ஆஜ்ஞையில் மகேசுவரன் - நிலை கொண்டுளன். குஹேசுவரலிங்கம் சூனியம் சூனியத்தைக் கூடியதனையதாம். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಭವನು = ಭವರಹಿತನು, ಅಜನು, ಬ್ರಹ್ಮನು; ಮೃಡ = ಶಿವ; ವ್ಯೋಮ = ಏನೂ ಇಲ್ಲದುದು, ವಿಶಾಲವಾದುದು, ಅನಂತವಾದುದು, ಚಿದಾಕಾಶ; ಶಾಂತ್ಯತೀತ = ಮಹೇಶ್ವರ(?); Written by: Sri Siddeswara Swamiji, Vijayapura