•  
  •  
  •  
  •  
Index   ವಚನ - 285    Search  
 
ಧರೆಯ ಮೇಲುಳ್ಳ ಅರುಹಿರಿಯರೆಲ್ಲರನು ನೆರಹಿ ಪರಿಯಾಯಪರೀಕ್ಷೆಯನೊರೆದು, ಬಣ್ಣವ ನೋಡಿ, ಸರೋವರದ ಪುಷ್ಪದೊಳು ಭರಿತ ಪರಿಮಳ ತುಂಬಿ, ಪರಮಜ್ಞಾನ ಜ್ಯೋತಿ ಪರಬ್ರಹ್ಮವನು ಮೀರಿ. ಪುರುಷರತ್ನದೊಳಡಗಿ, ಗುಹೇಶ್ವರ ನಿಂದ ನಿಲುವು ಮೇರು ಗಗನವ ನುಂಗಿತ್ತು.
Transliteration Dhareya mēluḷḷa aruhiriyarellaranu nerahi pariyāyaparīkṣeyanoredu, baṇṇava nōḍi, sarōvarada puṣpadoḷu bharita parimaḷa tumbi, paramajñāna jyōti parabrahmavanu mīri. Puruṣaratnadoḷaḍagi, guhēśvara ninda niluvu mēru gaganava nuṅgittu.
Hindi Translation धरती पर के ज्ञानी बुजुर्ग मिलकर, पर्याय परीक्षा से योग्यता देखकर, सरोवर के पुष्प में परिमल भरकर, परम ज्ञानज्योति परब्रह्म से अधिक, पुरुषरत्न में छिपा गुहेश्वर की खडी स्थिति, मेरु गगन से अधिक थी। Translated by: Eswara Sharma M and Govindarao B N
Tamil Translation உலகிலுள்ள சிவஞானிகள் அனைவரும் கூடி முறையாக ஆராய்ந்து உரைத்துக் காண்மின் குளத்திலுள்ள மலரில் நறுமணம் நிறைந்திலங்க தூய அறிவில் சிவஉணர்வு நிறைந்திலங்க “புருஷரத்தின”த்திலடங்கி குஹேசுவரன் நின்ற நிலை பிரம்ம மண்டலத்தைச் சூழ்ந்ததன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರುಹಿರಿಯರು = ಅರಿತ ಹಿರಿಯರು, ಅನುಭಾವಿಗಳು; ಒರೆದು ಬಣ್ಣವ ನೋಡಿ = ಒರೆದು ತಿಕ್ಕಿ ಪರೀಕ್ಷೆಯ ಮಾಡಿ ನೋಡಿರಿ; ನೆರಹಿ = ಸಮಾವೇಶಗೊಳಿಸಿ; ಪರಮ ಜ್ಞಾನಜ್ಯೋತಿ = ಶ್ರೇಷ್ಠವಾದ ಅರಿವಿನ ಬೆಳಕು, ಶಿವಪ್ರಜ್ಞೆ, ಆ ಶಿವಪ್ರಜ್ಞೆಯಿಂದ ಕೂಡಿದ ಸುಬುದ್ಧಿ; ಪರಿಮಳ = ಸದ್ಭಾವ, ಶಿವಭಾವ; ಪುರುಷರತ್ನ = ಅನುಭಾವಿಯಾದ ಶರಣ; ಮೇರುಗಗನ = ಶಿರೋಮಧ್ಯದ ಬ್ರಹ್ಮಮಂಡಲ; ಸರೋವರದ ಪುಷ್ಪ = ನಿರ್ಮಲವಾದ ಹೃದಯಕಮಲ; Written by: Sri Siddeswara Swamiji, Vijayapura