•  
  •  
  •  
  •  
Index   ವಚನ - 29    Search  
 
ಪಂಚಾಶತ್‍ಕೋಟಿ ಭೂಮಂಡಲವನು, ಒಂದು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು. ತಲೆಯಿಲ್ಲದೆ ಕಂಡು ಬೆರಗಾದೆನು. ನವಖಂಡ ಮಂಡಲ ಭಿನ್ನವಾದಂದು- ಆ ತಲೆಯ ಕಂಡವರುಂಟೆ ಗುಹೇಶ್ವರಾ?
Transliteration Pan̄cāśat‍kōṭi bhūmaṇḍalavanu, ondu taleyillada muṇḍa nuṅgitta kaṇḍenu. Taleyillade kaṇḍu beragādenu. Navakhaṇḍa maṇḍala bhinnavādandu- ā taleya kaṇḍavaruṇṭe guhēśvarā?
English Translation 2 The globe of the earth stretched Five hundred crores of leagues; And I saw a headless trunk arrive And swallow it whole! Watching it in a mindless daze, I was amazed. Did anyone see that head, when The nine-fold globe started apart, O Guhësvara?
Hindi Translation पंचा शतकोटि विस्तीर्ण भूमंडल को बिना सिरवाला मुंड निगला देखा। सिर रहित को देख चकित हुआ! नव खंड मंडल भिन्न हुआ तब उस सिर को देखा कोई है गुहेश्वरा ? Translated by: Eswara Sharma M and Govindarao B N
Tamil Translation எல்லையில்லா பூமண்டலத்தை ஒரு தலையற்ற முண்டம் விழுங்கியதைக் கண்டேன் தலையற்றதைக் கண்டு வியப்பெய்தினேன்! நவகண்டமண்டலம் சிதையும் பொழுது அந்தத் தலையைக் கண்டவர் உண்டோ குஹேசுவரனே? Translated by: Smt. Kalyani Venkataraman, Chennai
ಶಬ್ದಾರ್ಥಗಳು ತಲೆ = ಶುದ್ದ ಅರಿವು, ಆತ್ಮ ಪ್ರಜ್ಞೆ, ಪರಮಾರ್ಥಜ್ಞಾನ; ತಲೆ = ಮಾಯಾಪ್ರಪಂಚದಲ್ಲಿ ಕಾಣಬರುವ ಭೇದಜ್ಞಾನ; ತಲೆಯಿಲ್ಲದ ಮುಂಡ = ಸ್ವರೂಪದ ಮರೆವು, ಮಾಯೆ; ಮುಂಡ = ಗಾತ್ರ, ದೇಹ; Written by: Sri Siddeswara Swamiji, Vijayapura