ಅರಿವಿನ ಕುರುಹಿದೇನೊ, ಕುರುಹಿದೇನೊ!
ಒಳಗೆ ಅನಿಮಿಷ ನಂದಿನಾಥನಿರಲು
ಪೂಜಿಸುವ ಭಕ್ತನಾರೊ?
ಪೂಜೆಗೊಂಬ ದೇವನಾರೊ?
ಮುಂದು ಹಿಂದು, ಹಿಂದು ಮುಂದಾಡದೆ,
ಗುಹೇಶ್ವರ ನೀನು ನಾನು,
ನಾನು ನೀನಾದೊಡೆ.
Art
Manuscript
Music Courtesy:
Video
TransliterationArivina kuruhidēno, kuruhidēno!
Oḷage animiṣa nandināthaniralu
pūjisuva bhaktanāro?
Pūjegomba dēvanāro?
Mundu hindu, hindu mundāḍade,
guhēśvara nīnu nānu,
nānu nīnādoḍe.
Hindi Translationज्ञान का चिह्न क्या है , अंदर अनिमिष नंदिनाथ रहने तक ?
पूजनेवाला भक्त कौन है ? पूजा पानेवाला देव कौन है ?
आगे पीछे, पीछे आगे हो तो,
गुहेश्वरा तुम – मैं , मैं-तुम हो तो ?
Translated by: Eswara Sharma M and Govindarao B N
English Translation
Tamil Translationஞானத்தின் சின்னம் இது என்னவோ அகத்திலே,
கண்ணிமைக்கா நந்திநாதன் உளனன்றோ,
பூஜிக்கும் பக்தன் யார்? பூஜையை ஏற்கும் கடவுள் யார்?
கடவுள் யார்? பக்தன் யார்?
குஹேசுவரனே, நீயேதான், நானே நீயாக இலங்கும்பொழுது
இலட்சியப் பொளுள் எதுவோ?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅನಿಮಿಷ = ಆತ್ಮ ನಿಮಗ್ನ; ಅರಿವು = ಅರಿವಿನ ಘನವಾದ ಪರಶಿವ; ಒಳಗೆ = ಅಂತರಂಗದಲ್ಲಿ; ಕುರುಹು = ಆ ಪರಶಿವನ ಚುಳುಕುಗೊಂಡ ರೂಹು, ಮೂರ್ತಿಮಂತ ಸಂಕೇತ; ನಂದಿನಾಥ = ಶಕ್ತಿಯೊಡೆಯ, ಪರಶಿವ.; ಮುಂದು = ಎದುರಿನಲ್ಲಿ ಪೂಜೆಗೊಳ್ಳುವ ದೇವರು; ಹಿಂದು = ಪೂಜೆಗೈಯುವ ಭಕ್ತ, ಶರಣ; Written by: Sri Siddeswara Swamiji, Vijayapura