ಪಿಂಡಮುಕ್ತನ ಪದಮುಕ್ತನ
ರೂಪಮುಕ್ತನ ತಿಳಿದೆ ನೋಡಾ.
ಪಿಂಡವೆ ಕುಂಡಲಿಯ ಶಕ್ತಿ,
ಪದವೆ ಹಂಸನ ಚರಿತ್ರ,
ಬಿಂದು ಅನಾಹತವೆಂದರಿದು,
ಗುಹೇಶ್ವರಲಿಂಗವ ಕೂಡಿದೆನು.
Art
Manuscript
Music
Your browser does not support the audio tag.
Courtesy:
Transliteration
Piṇḍamuktana padamuktana
rūpamuktana tiḷide nōḍā.
Piṇḍave kuṇḍaliya śakti,
padave hansana caritra,
bindu anāhatavendaridu,
guhēśvaraliṅgava kūḍidenu.
Hindi Translation
पिंड मुक्त , पदमुक्त , रूप मुक्त जानकर देखो :
पिंड ही कुंडली शक्ति , पद ही हंस चरित्र।
बिंदु अनाहत जानकर गुहेश्वर लिंग से मिला ।
Translated by: Eswara Sharma M and Govindarao B N
Tamil Translation
பிண்டமுக்தனை, பதமுக்தனை, ரூபமுக்தனை அறிவாய்
பிண்டமே குண்டலினி சக்தி, பதமே ஜீவனின் வரலாறு!
பிந்து அனாஹமென்றறிந்து குஹேசுவர இலிங்கத்திலிணைந்தேன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು
ಪದ = ಹಂಸ; ಜೀವ, ಊರ್ಧ್ವಕುಂಡಲಿ ಯೋಗಸಾಧನೆಯಿಂದ ತ್ರಿಕೂಟಪದವನ್ನು ಏರಿದ ಶರಣನ ನಿಲುವು; ಪಿಂಡ = ಕುಂಡಲಿನಿ ಶಕ್ತಿ; ಪ್ರಾಣಪ್ರಜ್ಞಾಶಕ್ತಿ; ಜೀವನನ್ನು ಬದುಕಿಗೆ ಬಂಧಿಸುವ ಹಾಗೂ ಭವದಿಂದ ಮುಕ್ತಿಗೊಳಿಸುವ ವಿಶೇಷ ಶಕ್ತಿ; ರೂಪು = ಅನಾಹತ ಬಿಂದು; ಶಿವಯೋಗಿಯ ಧ್ಯೇಯವಾದ ಶಿವತತ್ವ್ತ;
Written by: Sri Siddeswara Swamiji, Vijayapura