Index   ವಚನ - 318    Search  
 
ಒಂದರ ಮೋರೆಯನೊಂದು ಮೂಸಿನೋಡಿ ಮತ್ತೊಚ್ಚಿ ಹೊತ್ತಿಂಗೆ ಕಚ್ಚಿಯಾಡಿ ಹೋದಂತೆಯಾಯಿತ್ತು, ನೋಡಿರೆ, ಕಲಿಯುಗದೊಳಗಣ ಮೇಳಾಪವ! ಗುರುವೆಂಬಾತ ಶಿಷ್ಯನಂತುವನರಿಯ. ಶಿಷ್ಯನೆಂಬಾತ ಗುರುವಿನಂತುವನರಿಯ. ಭಕ್ತರೆಂಬವರು ಭಕ್ತರೊಳಗೆ ಸಮವಿಲ್ಲ. ಜಂಗಮರೆಂಬವರು ಜಂಗಮದೊಳಗೆ ಸಮವಿಲ್ಲ. ಇದು ಕಾರಣ-ಕಲಿಯುಗದೊಳಗೆ ಉಪದೇಶವ ಮಾಡುವ ಕಾಳಗುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ?