ಅಂಬರದೊಳಗೊಂದು ಅಡವಿ ಹುಟ್ಟಿತ್ತು.
ಆ ಅಡವಿಯೊಳಗೊಬ್ಬ ವ್ಯಾಧನೈದಾನೆ.
ಆ ವ್ಯಾಧನ ಕೈಯಲ್ಲಿ ಸಿಕ್ಕಿತ್ತು ಒಂದು ಮೃಗವು.
ಆ ಮೃಗವ ಕೊಂದಲ್ಲದೆ ವ್ಯಾಧ ಸಾಯನು!
ಅರಿವು ಬರಿದುಂಟೆ ಗುಹೇಶ್ವರಾ?
Hindi Translationअंबर में एक कानन पैदा था।
उस कानन में एक व्याध है।
उस व्याध के हाथ लगा एक मृग।
उस मृग को मारे बिना व्याध नहीं मरता।
बिना श्रम ज्ञान प्राप्त नहीं होता गुहेश्वरा?
Translated by: Eswara Sharma M and Govindarao B N
English Translation A wilderness grew
in the sky.
In that wilderness
a hunter.
In the hunter's hands
a deer.
The hunter will not die
till the beast
is killed.
Awareness is not easy,
is it,
O Lord of Caves?
Translated by: A K Ramanujan Book Name: Speaking Of Siva Publisher: Penguin Books
---------------------
Tamil Translationவயலிலே ஒரு காடு தோன்றியது
அக்காட்டிலே ஒரு வேடனிருந்தான்.
அவ்வேடனின் கையிலொரு விலங்கு சிக்கியது
அவ்விலங்கைக் கொல்லாமல் வேடன் மடிவனோ
சிவவழியில் செல்லாமல் அறிவு வருமோ குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಂಬರ = ಬಯಲು, ಚೈತನ್ಯದಾಗಸ; ಅಡವಿ = ಅರಣ್ಯ, ಸಂಸಾರ; ಅರಿವುಂಟೆ = ಶಿವನೇ ನಾನು ಎಂಬ ಅರಿವು ಸಾಧ್ಯವೆ; ಬರಿದೆ ಅರಿವುಂಟೆ? ಬರ = ಶಿವಪಥವ ಕ್ರಮಿಸದೆ; Written by: Sri Siddeswara Swamiji, Vijayapura