•  
  •  
  •  
  •  
Index   ವಚನ - 323    Search  
 
ಸರ್ಪ ಸಂಸಾರಿಯೊಡನಾಡಿ ಕಟ್ಟುವಡೆಯಿತ್ತು, ಲೋಕವೆಲ್ಲಾ. ಮನವ ತಮಂಧ ಬಿಡದು, ಮನದ ಕಪಟ ಬಿಡದು. ಸಟೆಯೊಡನೆ ದಿಟವಾಡೆ ಬಯಲು ಬಡಿವಡೆಯಿತ್ತು! ಕಾಯದ ಸಂಗದ ಜೀವವುಳ್ಳನ್ನಕ್ಕರ, ಎಂದೂ ಭವ ಹಿಂಗದು ಗುಹೇಶ್ವರಾ.
Transliteration Sarpa sansāriyoḍanāḍi kaṭṭuvaḍeyittu, lōkavellā. Manava tamandha biḍadu, manada kapaṭa biḍadu. Saṭeyoḍane diṭavāḍe bayalu baḍivaḍeyittu! Kāyada saṅgada jīvavuḷḷannakkara, endū bhava hiṅgadu guhēśvarā.
Hindi Translation सर्प संसारी के संसर्ग में आकर बंधन में फँसा। मन का तमंध नहीं छोडता, मन का कपट नहीं छोडता। झूट के साथ सच मिले शून्य को धक्का लगा। शरीर के संग में जीव रहने तक कभी भव छूटता नहीं गुहेश्वरा ! Translated by: Eswara Sharma M and Govindarao B N
Tamil Translation பாம்பு பாம்பாட்டியால் பிணைப்புறுகிறது மனத்தினிருளகலாது. மனத்தின் வஞ்சனை அகலாது பொய்யுடன் உண்மை சேர்ந்து நொந்தது. உடல் தொடர்புடையோருக்கு ஆயுள் உள்ளவரை என்றுமே பிறவி அகலாது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಪಟ = ದ್ವಂದ್ವ; ಕಾಯ = ಸೂಕ್ಷ್ಮದೇಹ, ಮನಸ್ಸು; ತಮಂಧ = ತಮೋರೂಪ ಅಂಧಕಾರ, ಅಜ್ಞಾನ; ದಿಟ = ನಿಜ, ಸತ್ಯ; ಬಡಿವಡೆ = ಘಾಸಿಗೊಳ್ಳು, ಪೆಟ್ಟುತಿನ್ನು; ಬಯಲು = ಚಿದಾಕಾಶ, ಆತ್ಮ; ಸಟೆ = ಸುಳ್ಳು, ಮಿಥ್ಯ; Written by: Sri Siddeswara Swamiji, Vijayapura