ಕಾಮವ ಸುಟ್ಟು ಹೋಮವನುರುಹಿ,
ತ್ರಿಪುರಸಂಹಾರದ ಕೀಲ ಬಲ್ಲಡೆ,
ಯೋಗಿಯಾದಡೇನು? ಭೋಗಿಯಾದಡೇನು?
ಶೈವನಾದಡೇನು? ಸನ್ಯಾಸಿಯಾದಡೇನು?
ಅಶನವ ತೊರೆದಾತ ವ್ಯಸನವ ಮರೆದಾತ -
ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು.
Art
Manuscript
Music
Your browser does not support the audio tag.
Courtesy:
Transliteration
Kāmava suṭṭu hōmavanuruhi,
tripurasanhārada kīla ballaḍe,
yōgiyādaḍēnu? Bhōgiyādaḍēnu?
Śaivanādaḍēnu? San'yāsiyādaḍēnu?
Aśanava toredāta vyasanava maredāta -
guhēśvaraliṅgadalli avara hiriyarembenu.
Hindi Translation
काम जलाकर होम करके त्रिपुर संहार का रहस्य जाने ,
योगी हो तो क्या, भोगी हो तो क्या ?
शैव हो तो क्या , सन्यासी हो तो क्या ?
अशन त्यागे, व्यसन भूले
गुहेश्वर लिंग में उन्हें बुजुर्ग कहूँगा।
Translated by: Eswara Sharma M and Govindarao B N
Tamil Translation
காமத்தைச்சுட்டு, காமமற்று, முப்புரங்களை
அழிக்கும் ரகசியத்தை அறியின்
யோகியானாலென்ன, போகியானாலென்ன?
சைவனாயினென்ன, துறவியாயினென்ன?
புலனின்பம், துய்த்தலிற்கு உரியனவற்றைத் துறப்பின்
குஹேசுவர இலிங்கத்தில் அவரையே பெரியோரென்பேன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು
ಅಶನ = ವಿಷಯಲಾಲಸೆ; ಕಾಮ = ದೈಹಿಕಸುಖಾಸಕ್ತಿ; ತ್ರಿಪುರ = ಸ್ಥೂಲ, ಸೂಕ್ಷ್ಮ ಮತ್ತು ಕಾರಣದೇಹಗಳ ಮೋಹ; ಭೋಗಿ = ಎಲ್ಲ ಬಗೆಯ ಸಿರಿಸಂಪದಗಳುಳ್ಳ ರಾಜ; ಯೋಗಿ = ಇಂದ್ರಿಯ ವೃತ್ತಿಗಳನ್ನು ನಿಗ್ರಹಿಸಿ ಪ್ರಾಣಗತಿಯನ್ನು ನಿಯಂತ್ರಿಸಿ ಮನಸ್ಸನ್ನು ಧ್ಯೇಯದಲ್ಲಿ ಸ್ಥಿರಗೊಳಿಸಿ ಆನಂದಿಸುವ
ಧ; ವ್ಯಸನ = ಭೋಗ್ಯ ವಸ್ತುಗಳ ವ್ಯಾಮೋಹ; ಶೈವ = ಶಿವಾರಾಧಕ, ಶಿವಭಕ್ತ; ಸಂನ್ಯಾಸಿ = ಸರ್ವಸಂಗಪರಿತ್ಯಾಗಿ; ಹೋಮ = ಸಕಾಮ ಭಾವನೆ;
Written by: Sri Siddeswara Swamiji, Vijayapura