ವಚನ - 336     
 
ನಾಮ ನೇಮಂಗಳಾಗಿಪ್ಪ ಹಿರಿಯರು ಆದಿಕುಳವನರಿಯರಾಗಿ, ಇದೇನಯ್ಯಾ, ಸೂಕ್ಷ್ಮದ ಗಂಟಲಗಾಣವಿದೇನಯ್ಯಾ? ನೆಳಲ ರೂಹಿಂಗೆ ಬಯಲು ಸಯವೆ ಅಪಾಯರಹಿತ ಗುಹೇಶ್ವರಾ?