ಕಡಲ ನುಂಗಿದ ಕಪ್ಪಿನ ಪರಿಭವ ನವಸಾಸಿರ!
ಸಿಡಿಲು ಹೊಯ್ದ ಬಯಲಿಂಗೆ ಬಣ್ಣವುಂಟೆ?
ಕಂಗಳ ಮುಂದಣ ಕನಸು ಹಿಂಗಿದ ತುಂಬಿಯ ಪರಿಮಳ!
ಅಂಗವಿಲ್ಲದ ರೂಹಿಂಗೆ ಸಂಗವುಂಟೆ? ಇದೇನೋ!
ಗಗನದ ಹಣ್ಣನೆ ಕೊಯ್ದು, ಮುಗುದೆ ರುಚಿಯನರಿಯಳು!
ಹಗರಣದ ಅಮ್ಮಾವಿನ ಹಯನು ಸಯವಪ್ಪುದೆ ಗುಹೇಶ್ವರಾ?
Transliteration Kaḍala nuṅgida kappina paribhava navasāsira!
Siḍilu hoyda bayaliṅge baṇṇavuṇṭe?
Kaṅgaḷa mundaṇa kanasu hiṅgida tumbiya parimaḷa!
Aṅgavillada rūhiṅge saṅgavuṇṭe? -Idēnō!
Gaganada haṇṇane koydu, mugude ruciyanariyaḷu!
Hagaraṇadam'māvina hayanu sayavappude guhēśvarā?
Hindi Translation संसार सागर में विस्तृत परिभव नवसहस्र!
बिजली गिरने के शून्य का क्या रंग है ?
आँखों के आगे का सपना, भ्रमर की आशा नहीं घटती !
अंग रहित आत्मा से संबंध हो सकता ?
यह क्या है? आकाश के फल तोड़कर
मुग्धा रुची नहीं जानती।
काल्पनिक कामधेनु का दूध मिलता है ? गुहेश्वरा।
Translated by: Eswara Sharma M and Govindarao B N
Tamil Translation கடலை விழுங்கிய இருளின் துயரங்கள் கணக்கற்றவை
மின்னலனைய ஒளிரும் வயலிற்கு உருவம் உண்டோ?
கண்களின் முன்பு கனவு, தும்பியின் வேட்கை குறையுமோ? உறுப்பற்ற வடிவு இன்பம் எய்துமோ?
வானத்திலுள்ள பழத்தைக் கொய்து
கள்ளமறியாதவன் சுவைக்கவியலுமோ?
இந்திரஜால காமதேனுவின் பாலை அருந்தவியலுமோ குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಗಗನದ ಹಣ್ಣು = ತೋರಿಕೆ ಮಾತ್ರವಾದ ಫಲ; ಬಯಲು = ಪರಮಾತ್ಮ, ಚೈತನ್ಯ, ಮೂರ್ತಗೊಂಡ ಚೈತನ್ಯ, ಜೀವಾತ್ಮನು; ಸಯವಪ್ಪು = ತನ್ನದಾಗು, ಅಂಗವಿಸು; ಸಿಡಿಲು ಹೊಯ್ದ = ಮಿಂಚಿದ, ಕಾಣಬಂದ, ಮೂರ್ತಗೊಂಡ; ಹಗರಣದ ಹಮ್ಮಾವು = ಐಂದ್ರಜಾಲಿಕ ಕಾಮಧೇನು; ಹಯನು = ಹಾಲು, ಹಾಲಿನಿಂದಾಗುವ ಪದಾರ್ಥಗಳು;
Written by: Sri Siddeswara Swamiji, Vijayapura