ಮಾಯದ ಕೈಯಲಿ ಓಲೆ ಕಂಠವ ಕೊಟ್ಟಡೆ,
ಲಗುನ ವಿಗುನವ ಬರೆಯಿತ್ತು ನೋಡಾ.
ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದಡೆ,
ಅದು ಸಿರಿಯ ಸಿಂಗಾರವಾಯಿತ್ತು ನೋಡಾ.
ಅಂಬರದೊಳಗಾಡುವ ಗಿಳಿ ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದ ಅಗಲಿತ್ತು ನೋಡಾ, ಗುಹೇಶ್ವರಾ.
Transliteration Māyada kaiyali ōle kaṇṭhava koṭṭaḍe,
laguna vigunava bareyittu nōḍā.
Aragina put'thaḷige uriya sīreyanuḍisidaḍe,
adu siriya siṅgāravāyittu nōḍā.
Ambaradoḷagāḍuva giḷi pan̄jaradoḷagaṇa bekka nuṅgi
rambheya tōḷinda agalittu nōḍā, guhēśvarā.
Hindi Translation माया के हाथ से पत्र लिखने कहें तो,
लग्न-विघ्न लिख दिया देखो ।
लाख की पुतली को जलनेवाली साड़ी पहनाये तो
वह संपत्ती का शृंगार हुआ देखो ।
आसमान में विरहनेवाला शुक पिंजड़े की बिल्ली को निगलकर
रंभा के बाहों से बिछुड़ा था देखो, गुहेश्वरा ।
Translated by: Eswara Sharma M and Govindarao B N
Tamil Translation ஜீவனின் கையில் ஓலை, எழுத்தாணியை அளித்தால்
நன்மை, தீமைகளை எழுதியதைக் காணாய்.
அரக்கு பொம்மைக்கு அழலெனும் சீலையை உடுத்தினால் அந்த உலக வாழ்வே அவனுக்கு அணியாயிற்று காணாய். அம்பரத்தில் ஆடும் கிளி, கூட்டிலுள்ள பூனையை விழுங்கி ரம்பையின் தோளிலிருந்து சரிந்தது காணாய் குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಬರದೊಳಗಾಡುವ = ಚಿದಾಕಾಶದಲ್ಲಿ ರಮಿಸುವ; ಅರಗಿನ ಪುತ್ಥಳಿ = ನಶ್ವರವದ ದೇಹ ಹಾಗೂ ಅದರೊಳಗಿರುವ ಚಂಚಲ ಮನಸ್ಸು.; ಉರಿ = ಕಾಮಾದಿ ವ್ಯಸನಗಳ ದಾಹ, ಆ ಉರಿಯೇ ಸೀರೆ; ಕೈಯಲ್ಲಿ = ಅವನ ಅಧೀನಕ್ಕೆ; ಗಿಳಿ = ಆತ್ಮ, ಶುದ್ಧಜೀವ; ಮಾಯದ = ಮಾಯೆಯ ಒಡಲಲ್ಲಿ ಮೂಡಿದ ಜೀವಾತ್ಮ ; ಮಿಗುನ = ವಿಘ್ನ; ಲಗುನ = ಲಗ್ನ; ಶುಭ-ಅಶುಭ ಕರ್ಮಗಳು = ಆ ಕರ್ಮಗಳಿಂದ ಉಂಟಾಗುವ ಸಂಸ್ಕಾರಗಳು ಅಥವಾ ವಾಸನೆಗಳು; ಸಿರಿಯ ಸಿಂಗಾರವಾಯಿತ್ = ಆ ಸಂಸಾರವೇ ಅವನಿಗೆ ಅಲಂಕರಣವಾಯಿತು;
Written by: Sri Siddeswara Swamiji, Vijayapura