•  
  •  
  •  
  •  
Index   ವಚನ - 355    Search  
 
ಬಂದುದನೆಲ್ಲವ ನುಂಗಿ, ಬಾರದುದನೆಲ್ಲವ ನುಂಗಿ, ಆರಿಗಿಲ್ಲದ ಅವಸ್ಥೆ ಎನಗಾಯಿತ್ತು. ಆ ಅವಸ್ಥೆ ಅರತು ನೀನು, ನಾನೆಂದರಿದೆ ಗುಹೇಶ್ವರಾ.
Transliteration Bandudanellava nuṅgi, bāradudanellava nuṅgi, ārigillada avasthe enagāyittu. Ā avasthe aratu nīnu, nānendaride guhēśvarā.
Hindi Translation जो आये उसे स्वीकार कर, न आये को दूरकर , किसी को नहीं रही अवस्था मुझे हुई है। उस अवस्था को जानकर तुमही मैं समझा गुहेश्वरा। Translated by: Eswara Sharma M and Govindarao B N
Tamil Translation வந்ததனைத்தையும் ஏற்று, வராமலிருந்ததை மறைத்து எவருக்கும் ஏற்படாத நிலை எனக்காயிற்று அந்த நிலையையறிந்து நீ நான் என்றறிந்தேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರ್ = ಇಂಗು, ಇಲ್ಲದಾಗು, ಅಡಗು; ಅವಸ್ಥೆ = ಅನುಭಾವಿಕ ಸ್ಥಿತಿ; ಆ ಅವಸ್ಥೆ = ಆತ್ಮಾನ್ಯ ನೆನಹುಗಳಿಲ್ಲದ ಶರಣದ ಶಿವಯೋಗಸ್ಥಿತಿ; ಆರಿಗಿಲ್ಲದ = ಆರಿಗೂ ಇಲ್ಲದ, ಅಪರೂಪವಾದ; ನುಂಗು = ಸ್ವೀಕರಿಸು, ಲಿಂಗಪ್ರಸಾದವಾಗಿ ಅನುಭವಿಸು; ಬಂದುದು = ಬದುಕಿನ ವೀಥಿಯಲ್ಲಿ ಅನುಭವಕ್ಕೆ ಬಂದ ಸುಖ-ದುಃಖಾದಿಗಳು; ಬಾರದುದು = ಬರಬೇಕಾದುದು, ಬರದೆ ಇದ್ದುದು; ಭವಿಷ್ಯದ ಕನಸುಗಳು, ಬಯಕೆಗಳು; ಹಿಂಗು = ಅಡಗಿಸು, ಮರೆಮಾಡು, ಇಲ್ಲದಾಗು; Written by: Sri Siddeswara Swamiji, Vijayapura