•  
  •  
  •  
  •  
Index   ವಚನ - 354    Search  
 
ನಾಚಿ ಮಾದುದು ಮಾದುದಲ್ಲ, ನಾಚದೆ ಮಾದುದು ಮಾದುದಲ್ಲ. ಹೇಸಿ ಮಾದುದು ಮಾದುದಲ್ಲ, ಹೇಸದೆ ಮಾದುದು ಮಾದುದಲ್ಲ. ಆಲಸಿ ಮಾದುದು ಮಾದುದಲ್ಲ, ಆಲಸದೆ ಮಾದುದು ಮಾದುದಲ್ಲ. ನಾಚದೆ ಹೇಸದೆ ಆಲಸದೆ ಮಾದಡೆ ಮಾದುದು ಗುಹೇಶ್ವರಾ.
Transliteration Nāci mādudu mādudalla, nācade mādudu mādudalla. Hēsi mādudu mādudalla, hēsade mādudu mādudalla. Ālasi mādudu mādudalla, ālasade mādudu mādudalla. Nācade hēsade ālasade mādaḍe mādudu guhēśvarā.
Hindi Translation लज्जा से त्यागना त्याग नहीं, बिनालज्जा त्यागना त्याग नहीं। घृणा से त्यागना त्याग नहीं, बिना घृणा त्यागना त्याग नहीं। आलस्य से त्यागना त्याग नहीं , बिना आलस्य से त्यागना त्याग नहीं। बिना लज्जा, बिना घृणा, बिनाआलस्य से करे वह त्याग है गुहेश्वरा। Translated by: Eswara Sharma M and Govindarao B N
Tamil Translation நாணித் துறப்பது துறவன்று, நாணாது துறப்பது துறவன்று அருவருத்துத் துறப்பது துறவன்று, அருவருக்காது துறப்பது துறவன்று சோம்பித் துறப்பது துறவன்று, சோம்பாது துறப்பது துறவன்று நாணாது, அருவருக்காது, சோம்பாது துறப்பது துறவாகும் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಲಸು = ಬೇಸರಿಸು; ನಾಚು = ಲಜ್ಜೆಪಡು; ಮಾದು = ಮಾಣ್>ಮಾಣ್ದು>ಮಾಣ್ದುದು>; ಮಾದುದು = ಬಿಡುವುದು, ತ್ಯಜಿಸುವುದು; ಹೇಸು = ಹೇಯಭಾವ ತಾಳು, ಅಸಹ್ಯಪಡು; Written by: Sri Siddeswara Swamiji, Vijayapura