ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು,
ಲಿಂಗವಾರ್ತೆಯ ನುಡಿವರಯ್ಯಾ.
ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ.
ಮನಬಂದ ಪರಿಯಲ್ಲಿ ನುಡಿವಿರಿ,
ಗುಹೇಶ್ವರಲಿಂಗ ನಿಮಗೆಲ್ಲಿಯದೊ?
Transliteration Aṅgajīvigaḷellā aśanakke neredu,
liṅgavārteya nuḍivarayyā.
Kāyajīvigaḷellā kaḷavaḷisi nuḍivarayyā.
Manabanda pariyalli nuḍiviri,
guhēśvaraliṅga nimagelliyado?
Hindi Translation दैहिक सुखी अशन से मिलाकर लिंगवार्ता करते हैं।
काय जीवी व्यथा से बोलते हैं।
मन छाये मार्ग से बोलते हैं।
गुहेश्वर नामक लिंग तुम्हें कहाँ ?
Translated by: Eswara Sharma M and Govindarao B N
Tamil Translation உடலை நயப்போர் கூடி உண்பதற்காக
இலிங்கம் குறித்து உரைப்பர் ஐயனே,
சூட்சும உடலை நயப்போர் மருளுற்று
உரைப்பர் ஐயனே, மனம் போன போக்கில்
உரைப்பர் குஹேசுவரன் எனும் இலிங்கத்தை
உம்மால் உணரவியலுமோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗಜೀವಿ = ಅಂಗಪ್ರೇಮಿ, ಅಂಗಸುಖದಲ್ಲಿ ಸುಖಿಸುವವ, ಉದರಪೋಷಕ; ಅಶನ = ಅನ್ನಪಾನಾದಿಗಳು, ಶಬ್ದಸ್ಪರ್ಶಾದಿ ವಿಷಯಗಳು; ಕಾಯ = ಸೂಕ್ಷ್ಮಕಾಯ, ಮನಸ್ಸು; ಕಾಯಜೀವಿ = ಮನೋವಿಲಾಸಿ, ಮನದ ಬಯಕೆಗಳನ್ನು ಈಡೇರಿಸುವುದರಲ್ಲಿ ಆಸಕ್ತನಾದವ; ನೆರೆ = ಒಂದುಗೂಡು; ಲಿಂಗವಾರ್ತೆ = ಲಿಂಗ ಕುರಿತಾದ ಪಾಂಡಿತ್ಯದ ಮಾತುಗಳು;
Written by: Sri Siddeswara Swamiji, Vijayapura