ಆದಿಯನರಿಯರು ಅನಾದಿಯನರಿಯರು,
ಒಂದರೊಳಗಿಪ್ಪ ಎರಡನರಿಯರು,
ಎರಡರೊಳಗಿಪ್ಪ ಮೂರರ ಕೀಲನರಿಯರು,
ಮೂರರ ಸಂದು ಆರಾದುದನರಿಯರು.
ಆರೆಂದು ನುಡಿವ ಗಾರು ಮಾತು ತಾನಲ್ಲ.
ಗುಹೇಶ್ವರ[ನ] ನಿಲವನರಿದಡೆ ಒಂದೂ ಇಲ್ಲ.
ಅರಿಯದಿರ್ದಡೆ ಬಹುಮುಖವಯ್ಯಾ.
Transliteration Ādiyanariyaru anādiyanariyaru,
ondaroḷagippa eraḍanariyaru,
eraḍaroḷagippa mūrara kīlanariyaru,
mūrara sandu ārādudanariyaru.
Ārendu nuḍiva gāru mātu tānalla.
Guhēśvara[na] nilavanaridaḍe ondū illa.
Ariyadirdaḍe bahumukhavayyā.
Hindi Translation आदि नहीं जानते, आनादि नहीं जानते।
एक में रहे दो नहीं जानते।
दो में रहे तीन का रहस्य नहीं जानते।
तीनों का समूह छः हुआ नहीं जानते;
छः कहने का सत्य बात नहीं।
गुहेश्वर की स्थिति जाने तो एक भी नहीं;
न जाने तो कई मुँह हैं।
Translated by: Eswara Sharma M and Govindarao B N
Tamil Translation ஆதியையறியார், அனாதியையறியார்
ஒன்றினுள்ளே உள்ள இரண்டினை அறியார்
இரண்டினுள்ளே உள்ள மூன்றின் இரகசியத்தையறியார்
மூன்று, மாறுபட்டு ஆறு ஆவதையறியார்
ஆறு எனக்கூறும் சொக்குப் பேச்சு உண்மையன்று.
குஹேசுவரனின் நிலையை அறியின் ஒன்றும் இல்லை
அறியாதிருப்பின் பலமுகங்கள் ஐயனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಾದಿ = ಕಾಲಿಕ, ಆದಿ ಇಲ್ಲದುದು, ಸೃಷ್ಟಿಗೆ ಮೂಲಕಾರಣವಾದುದು, ಮಹಲಿಂಗ.; ಅರಿ = ಶಿವಯೋಗಸಾಧನೆಯ ಮೂಲಕ ತಿಳಿ, ಅನುಭವಿಸು; ಆದಿ = ಪರಮ ಮೂಲತತ್ವ, ಪರವಸ್ತು, ಪರಶಿವ; ಒಂದು = ಪರಶಿವನ ಸೂಕ್ಷ್ಮಾಭಿವ್ಯಕ್ತಿಯಾದ ಮಹಲಿಂಗ. ಅದು ಶಿವ-ಶಕ್ತಿ ಸಂಪುಟ
ತೇಜೋಮೂರ್ತಿ. ಮಹಾಸ್ಥಲ.; ನಿಲವು = ಸ್ವರೂಪ;
Written by: Sri Siddeswara Swamiji, Vijayapura