Index   ವಚನ - 357    Search  
 
ಆದಿಯನರಿಯರು ಅನಾದಿಯನರಿಯರು, ಒಂದರೊಳಗಿಪ್ಪ ಎರಡನರಿಯರು, ಎರಡರೊಳಗಿಪ್ಪ ಮೂರರ ಕೀಲನರಿಯರು, ಮೂರರ ಸಂದು ಆರಾದುದನರಿಯರು. ಆರೆಂದು ನುಡಿವ ಗಾರು ಮಾತು ತಾನಲ್ಲ. ಗುಹೇಶ್ವರ[ನ] ನಿಲವನರಿದಡೆ ಒಂದೂ ಇಲ್ಲ. ಅರಿಯದಿರ್ದಡೆ ಬಹುಮುಖವಯ್ಯಾ.