•  
  •  
  •  
  •  
Index   ವಚನ - 358    Search  
 
ಸುಖವಿಲ್ಲ ಸೂಳೆಗೆ, ಪಥವಿಲ್ಲ ಶೀಲಕ್ಕೆ ಮಾಡಲಾಗದು ನೇಮವ, ನೋಡಲಾಗದು ಶೀಲವ. ಸತ್ಯವೆಂಬುದೆ ಸತ್‍ಶೀಲ, ಗುಹೇಶ್ವರಲಿಂಗವನರಿಯ ಬಲ್ಲಂಗಿದೇ ಶೀಲ.
Transliteration Sukhavilla sūḷege, pathavilla śīlakke māḍalāgadu nēmava, nōḍalāgadu śīlava. Satyavembude sat‍śīla, guhēśvaraliṅgavanariya ballaṅgidē śīla.
Hindi Translation वेश्या को सुख नहीं, शील को पथ नहीं; नेम नहीं कर सकते, शील नहीं देखा जाता। गुहेश्वर लिंग जाननेवाले को सत्य ही सत्शील है। Translated by: Eswara Sharma M and Govindarao B N
Tamil Translation விலைமகளுக்கு இன்பமில்லை. ஆசாரத்திற்கு சிவ வழியில்லை நியமத்தைச் செய்யலாகுமோ? ஆசாரத்தைக் காணலாகுமோ? குஹேசுவரலிங்கத்தை அறிய வல்லவனுக்கு உண்மை என்பதே உயர்ந்த ஆசாரமாம். Translated by: Smt. Kalyani Venkataraman, Chennai
ಶಬ್ದಾರ್ಥಗಳು ನೇಮ = ಇಹ-ಪರ ಸುಖದ ಉದ್ದೇಶಕ್ಕಾಗಿ ಮಾಡಲಾಗುವ ವಿಶಿಷ್ಟ ವ್ರತ; ಪಥ = ಶಿವಪಥ; ಶೀಲ = ಅನ್ನ-ನೀರು ಮುಂತಾದ ವಿಷಯಗಳಲ್ಲಿ ಮಡಿವಂತ ಆಚರಣೆ; ಸುಖ = ಹಿತವಾದ ಕುಟುಂಬದಲ್ಲಿ ಸತಿಯು ಅನುಭವಿಸುವ ನೆಮ್ಮದಿ, ಸಾತ್ವಿಕಸೌಖ್ಯ; Written by: Sri Siddeswara Swamiji, Vijayapura