Index   ವಚನ - 361    Search  
 
ಬಲ್ಲನಿತ ಬಲ್ಲರಲ್ಲದೆ, ಅರಿಯದುದನೆಂತು ಬಲ್ಲರಯ್ಯಾ? ಅರಿವು ಸಾಮಾನ್ಯವೆ? ಅರಿಯದುದನಾರಿಗೂ ಅರಿಯಬಾರದು, ಗುಹೇಶ್ವರನೆಂಬ ಲಿಂಗವನರಿಯದಡೆರಡು, ಅರಿದೊಡೊಂದೇ.