•  
  •  
  •  
  •  
Index   ವಚನ - 360    Search  
 
ತುಂಬಿದ ತೊರೆಯ ಹಾಯ್ದಹೆವೆಂದು ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ. ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ. ಎಚ್ಚತ್ತು ನಡಿಸಿರೆ. ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ, ಹರುಗೋಲು ಮುಳುಗದೆ, ಏರಿದವರು ಸತ್ತರು. ಇದರೊಳಹೊರಗನರಿದಾತನಲ್ಲದೆ ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ.
Transliteration Tumbida toreya hāydahevendu harugōlanēruva aṇṇagaḷu nīvu kēḷire. Toreyoḷagaṇa negaḷu harugōla nuṅgidaḍe, gatiyilla. Eccattu naḍisire. Naḍudoreyalli huṭṭu hāykidaḍe, harugōlu muḷugade, ēridavaru sattaru. Idaroḷahoraganaridātanallade guhēśvaraliṅgadalli acca śaraṇanalla.
Hindi Translation भरी नदी पार करेंगे जान ते नाव चढे भाईयॊं तुम सुनो। नदी का मगर नाव को निगले तो गती नहीं। सावधानी से चलाइए। नदी बीच में नौकादंड चलाने से नाव बिना डूबे चढे हुए मरे। इसके अंदर बाहर न जाननेवाला। गुहेश्वर लिंग में निजशरण नहीं हैं। Translated by: Eswara Sharma M and Govindarao B N
Tamil Translation நிறைந்தோடும் துறையைக் கடக்க எண்ணி படகிலேறும் அண்ணன்மீர், நீவிர் கேள்மின் துறையிலுள்ள முதலை படகை விழுங்கின் கதி என்ன? விழிப்புடன் செலுத்துவீர்! நடுத்துறையில் சாதனையைச் செயின் படகு முழுகாமல் ஏறியவர் அகன்றனர். இதன் அகம், புறத்தை அறிந்தவனே குஹேசுவரலிங்கத்தின் உண்மையான சரணனன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಚ್ಚ ಶರಣ = ನಿಜ ಶರಣ, ನಿಜವನರಿತ ಶರಣ; ಇದರ = ಈ ತೊರೆಯ, ಈ ತೊರೆಯ ದಾಂಟಿಸುವ ಸಾಧನೆಯ; ಒಳಹೊರಗು = ರಹಸ್ಯ; ತುಂಬಿದ ತೊರೆ = ಶಬ್ದಾದಿ ವಿಷಯಗಳಿಂದ ತುಂಬಿಹೋದ ಪ್ರಪಂಚ ಪ್ರವಾಹ; ಹರುಗೋಲು = ನೌಕೆ, ತೆಪ್ಪ, ದೇಹ-ಮನಸ್ಸು; Written by: Sri Siddeswara Swamiji, Vijayapura