ವಚನ - 362     
 
ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ? ಅರಿದವರು ಅರಿದೆವೆಂಬರೆ? ಅರಿಯಬಾರದ ಘನವನರಿದು, ಅರಿಯದಂತಿಪ್ಪರು ಗುಹೇಶ್ವರಾ.