ಹುಲಿಯ ತಲೆಯ ಹುಲ್ಲೆ, ಹುಲ್ಲೆಯ ತಲೆಯ ಹುಲಿ,
ಈ ಎರಡರ ನಡು ಒಂದಾಯಿತ್ತು! ಹುಲಿಯಲ್ಲ ಹುಲ್ಲೆಯಲ್ಲ.
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದಡೆ,
ಎಲೆ ಮರೆಯಾಯಿತ್ತು ಕಾಣಾ, ಗುಹೇಶ್ವರಾ.
Hindi Translationबाघ के सिर का हिरन, हिरन के सिर का बाघ ;
दोनों की कमर एक है।
बाघ नहीं, हिरन नहीं।
बीच में एक आकार गाजुगलता देखो !
बिना सिर कमर सूखे पत्ते चबाये तो
पत्ता ओजल हो गया देखो गुहेश्वरा ।
Translated by: Eswara Sharma M and Govindarao B N
English Translation Is it a tiger-headed deer, or
A deer-headed tiger?
For the two have grown to a trunk.
No, it's neither tiger nor deer.
Near by, chewing the cud,
Another beast has come.
If a headless trunk will browse
On dry leaves,
Is it a wonder, O Guheśvara,
If one loses sight of
The green leaves?
Tamil Translationபுலியின் தலையில் மான், மானின் தலையில் புலி
இவற்றின் மூலவுடல் ஒன்றாக விளங்கியது
மானன்னு, புலியன்று!
அதனருகில் வந்து மென்றது காணாய்!
தலையற்ற முண்டம் உலர்ந்த இலையை மேய்ந்தால்
இலை மறைந்தது காணாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಮಾಯಾವಿಲಾಸವಿಡಂಬನಸ್ಥಲ
ಶಬ್ದಾರ್ಥಗಳುಎಲೆ = ಸಂಸಾರ; ತಲೆ = ಸ್ವರೂಪಜ್ಞಾನ; ಮುಂಡ = ಜಡದೇಹ; ಹುಲಿ = ಕಾಲ.; ಹುಲಿಯ ತಲೆಯ ಹುಲ್ಲೆ = ಕಾಲದ ರೂಪದಲ್ಲಿರುವ ಮೋಹ; ಹುಲ್ಲೆ = ಮೋಹ; ಹುಲ್ಲೆಯ ತಲೆಯ ಹುಲಿ = ಮೋಹರೂಪದಲ್ಲಿರುವ ಕಾಲ; Written by: Sri Siddeswara Swamiji, Vijayapura