ಸಟೆ ದಿಟವಾದಲ್ಲಿ ಮುಟ್ಟಿಯೂ ಮುಟ್ಟದೆ ಇರಬೇಕು.
ಅತಿರತಿ ಗತಿಮತಿಗೆ ಮಂದವಾಯಿತ್ತು.
ಎಂಟು ಹಿಟ್ಟು ಪಂಚಮಠವುಂಟು ಧರೆಯ ಮೇಲೆ.
ನರಸುರಾದಿಗಳೆಲ್ಲ ಸಭಾರವ ಹೊತ್ತು ಬಂದೈದಾರೆ.
ಹಿಟ್ಟು ನಷ್ಟ, ಮಠ ಹಾಳು, ಊರಿಗುಪಟಳ,
ಮಠವ ಸುಟ್ಟು ಗುಹೇಶ್ವರ ಬೀದಿಗರುವಾದ.
Transliteration Saṭe diṭavādalli muṭṭiyū muṭṭade irabēku.
Atirati gatimatige mandavāyittu.
Eṇṭu hiṭṭu pan̄camaṭhavuṇṭu dhareya mēle.
Narasurādigaḷella sabhārava hottu bandaidāre.
Hiṭṭu naṣṭa, maṭha hāḷu, ūrigupaṭaḷa,
maṭhava suṭṭu guhēśvara bīdigaruvāda.
Hindi Translation न रहा रहेतो छूनेपर भी न छूने जैसे रहना।
अति रती गति मति का बुरा हुआ था।
आठआटा, पाँचमठ हैं धरापर।
नर सुरादि सब सांभार पदार्थ ढो आये हैं
आटा नाश, मठ बरबाद, गाँव को उपद्रव,
घन मठ जलकर गुहेश्वरा अनाथ हुआ।
Translated by: Eswara Sharma M and Govindarao B N
Tamil Translation தோன்றாது தோற்றம் கொளின், கண்டும்
நயவாது இருத்தல் வேண்டும்
மிகுதியான ஆசை, அறிவை மங்கச் செய்து
கதியைக் காணவியலாது செய்கிறது
பூமியிலே எண்வகை துய்க்கும் செல்வங்களும்
ஐந்து மடமும் உள்ளன. நர, சுரர்கள்
நறுமணப்பொருட்களுடன் வந்துள்ளனர்
துய்க்கும் மோகம் அடங்க, உடலுணர்வு அகல
புலன்கள் அமைதியுற, உலக உணர்வை அகற்றி
முழுமையாகத் தன்னிச்சையுடையவனாயினன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತಿರತಿ = ಅತಿಯಾದ ರತಿ, ಮಿತಿಮೀರಿದ ಆಸಕ್ತಿ; ಅವುಗಳನ್ನು, ಹೊತ್ತು = ಹೊತ್ತು ಬಂದಿದ್ದಾರೆ; ಲಾಲಸೆಗಳೊಂದಿಗೆ ಹುಟ್ಟಿ ಬಂದಿದ್ದಾರೆ; ಊರಿಗುಪಟಳ = ಇಂದ್ರಿಯ ಸಮೂಹ ಶಾಂತವಾಗುತ್ತದೆ; ವಸ್ತು ಹಾಗೂ ವ್ಯಕ್ತಿಗಳ ಬಗೆಗಿರುವ ವಿಭಿನ್ನ ಕಲ್ಪನೆಗಳೆಲ್ಲ ಬಾಧೆಗೊಳ್ಳುತ್ತವೆ, ಅಡಗ; ಎಂಟು ಹಿಟ್ಟು = ಎಂಟು ಬಗೆಯ ಭೋಗೈಶ್ವರ್ಯಗಳಿವೆ. ಅವು ಗೃಹ, ಶಯ್ಯಾ, ವಸ್ತ್ರ, ಆಭರಣ, ಗಂಧಮಾಲ್ಯ, ಪುಷ್ಪ, ಮೃಷ್ಟಾನ್ನ, ತಾಂಬೂಲ; ಗತಿಮತಿ = ಪರಮಾತ್ಮನು-ಗತಿ ಅವನ ಸಾಕ್ಷಾತ್ಕಾರಕ್ಕೆ ಕಾರಣವಾದ ಬುದ್ದಿಯು-ಮತಿ; ಘನಮಠ ಸುಟ್ಟು = (ಆಗ ಆ ಶರಣನು) ವಿಶಾಲವಾದ ವಿಶ್ವವೆಂಬ ಮಹಾನಿಲಯದ ಭಾವವನ್ನು ತೊಡೆದುಹಾಕಿ.; ದಿಟವಾದಲ್ಲಿ = ತೋರಿಬಂದರೆ; ಧರೆಯ ಮೇಲೆ = ಈ ಭೂಮಂಡಲದಲ್ಲಿ; ನರಸುರಾದಿಗಳು = ನರರು, ಸುರರು ಮತ್ತು ಇತರ ಎಲ್ಲ ಬಗೆಯ ಜೀವರು; ಪಂಚಮಠ = ಪಂಚಭೂತಗಳಿಂದಾದ ದೇಹ; ಬೀದಿಗರುವಾದ = (ಬೀದಿಯ ಕರು) ಪೂರ್ಣ ಸ್ವತಂತ್ರನಾದ; ಮಂದವಾಯಿತ್ತು = ಆ ಗತಿಯು ಕಾಣದಂತಾಗಿದೆ, ಆ ಮತಿಯು ಮಂದವಾಗಿದೆ; ಮಠ ಹಾಳು = ದೇಹಾತ್ಮ ಭಾವವು ಇಲ್ಲದಾಗುತ್ತದೆ; ಮುಟ್ಟಿಯೂ ಮುಟ್ಟದೆ ಇ = ಅದನ್ನು ನೋಡಿಯೂ ಮೋಹಗೊಳ್ಳದೆ ಇರಬೇಕು; ಸಂಭಾರವ = ಅಡುಗೆಯ ರುಚಿಯನ್ನು ಹೆಚ್ಚಿಸುವ ಮಸಾಲೆಯ ಪದಾರ್ಥಗಳು; ಭೋಗ್ಯ ಪದಾರ್ಥಗಳ ಒಲವ ಹೆಚ್ಚಿಸುವ ಲಲಾಸೆಗಳು; ಸಟೆ = ಮೊದಲು ಇಲ್ಲದುದು; ಹಿಟ್ಟು ನಷ್ಟ = ಅಷ್ಟಭೋಗೈಶ್ವರ್ಯಗಳ ವ್ಯಾಮೋಹ ನಾಶವಾಗುತ್ತದೆ;
Written by: Sri Siddeswara Swamiji, Vijayapura