ಐವರ ಸಂಗದಿಂದ ಬಂದೆ ನೋಡಯ್ಯಾ.
ಐವರ ಸಂಗದಿಂದ ನಿಂದೆ ನೋಡಯ್ಯಾ.
ಈ ಐವರೂ ತಮ್ಮ ತಮ್ಮ ಬಟ್ಟೆಯಲ್ಲಿ ಹೋದರು.
ನಾನೊಬ್ಬನೆ ನಿಸ್ಸಂಗಿಯಾಗಿ ಉಳಿದೆನಲ್ಲಾ!
ಗುಹೇಶ್ವರನೆಂಬ ನಿತ್ಯನಿರಂಜನ ರೂಹಿಲ್ಲದ
ಘನವ ಕಂಡೆನಯ್ಯಾ.
Transliteration Aivara saṅgadinda bande nōḍayyā.
Aivara saṅgadinda ninde nōḍayyā.
Ī aivarū tam'ma tam'ma baṭṭeyalli hōdaru.
Nānobbane nis'saṅgiyāgi uḷidenallā!
Guhēśvaranemba nityaniran̄jana rūhillada
ghanava kaṇḍenayyā.
Hindi Translation पाँचों के संग से आया देखो।
पाँचों के संग से खडा हूँ देखो।
पाँचों अपने अपने रास्ते पर गये।
मैं अकेला निःसंगी होकर रहा।
गुहेश्वरा नामक नित्य निरंजन।
रूह रहित घन देखा।
Translated by: Eswara Sharma M and Govindarao B N
Tamil Translation ஐவரின் இணைவால் வந்தேன் காண்ஐயனே
ஐவரின் இணைவால் நிலைபெற்றேன் காண் ஐயனே
ஐவரும் அவரவர் வழியிலே சென்றனர்
நான் ஒருவனே நானாக எஞ்சினேனன்றோ!
குஹேசுவரனெனும் நிலைபெற்ற
உருவமற்ற மெய்ப்பொருளைக் கண்டேனையனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಐವರು = ಸೂಕ್ಷ್ಮ ಹಾಗೂ ಸ್ಥೂಲ ಪಂಚಭೂತಗಳು; ಭೂಮಿ, ಜಲ, ಅಗ್ನಿ, ವಾಯು ಹಾಗೂ ಆಕಾಶ; ಐವರು = ಆ ಐದು ಭೂತಗಳು; ಕಂಡೆ = ನಾನು ಕಂಡೆ; ಘನವ = ಪರಿಪೂರ್ಣ ವಸ್ತುವನ್ನೆ; ತಮ್ಮ ತಮ್ಮ ಬಟ್ಟೆಯಲ್ = ತಾವು ತೋರಿಬಂದ ರೀತಿಯಲ್ಲಿಯೆ; ನಾನು = ಶಿವೋsಹಂ-ಎಂಬ ಅಭೇದ ಪ್ರಜ್ಞೆಹೊಂದಿದ ನಾನು (ಶರಣ); ನಿಂದೆ = ಬಳಿಕ ಆ ಭೂತಗಳ ಸ್ಥೂಲಕೃತಿಯಾದ ದೇಹದಲ್ಲಿ ನಾನು ನೆಲೆಸಿದೆ.; ನಿತ್ಯ = ಸದಾ ಅಸ್ತಿತ್ವದಲ್ಲಿರುವ; ನಿರಂಜನ = ಅತ್ಯಂತ ಶುದ್ದ; ನಿಸ್ಸಂಗಿಯಾಗಿ ಉಳಿದೆ = ದೇಹ ಹಾಗೂ ಪಂಚಭೂತಗಳ ಭಾವ ಅಡಗಿದುದರಿಂದ ನಾನು ಕೇವಲ ನಾನಾಗಿ ಉಳಿದೆ; ಬಂದೆ = ಜೀವಭಾವ ತಾಳಿದೆ; ರೂಹಿಲ್ಲದ = ಯಾವುದೇ ಆಕಾರವಿಲ್ಲದ; ಸಂಗದಿಂದ = ಆ ಪಂಚಭೂತಗಳು ಒಂದರೊಳಗೊಂದು ಬೆರೆತಾಗ ಅಂತಃಕರಣವೆಂಬ ಸೂಕ್ಷ್ಮ ದೇಹದ ರಚನೆ, ಆ ದೇಹದ ಸಂಗದಿಂದಾಗಿ; ಹೋದರು = ಅಡಗಿದವು;
Written by: Sri Siddeswara Swamiji, Vijayapura