ಮನ ಮುಟ್ಟದ ಮಜ್ಜನ, ತನು ತಾಗದ ದೇಹಾರ,
ಭಾವ ತಾಗದ ಪೂಜೆ, ಎವೆ ತಾಗದ ನೋಟ
ವಾಯು ತಾಗದ ಲಿಂಗದ ಠಾವ ತೋರಾ ಗುಹೇಶ್ವರಾ.
Transliteration Mana muṭṭada majjana, tanu tāgada dēhāra,
bhāva tāgada pūje, eve tāgada nōṭa
vāyu tāgada liṅgada ṭhāva tōrā guhēśvarā.
Hindi Translation मन न लगा मज्जन में, तनु न लगा प्रसाद में,
भाव न लगी पूजा में, एकटक देखना ;
वायु न लगा लिंगस्थल दिखाओ गुहेश्वरा।
Translated by: Eswara Sharma M and Govindarao B N
Tamil Translation சங்கற்ப விகல்பங்களற்ற திருமஞ்சனம்
உடல் உணர்வற்ற நிலையிலே படையல்
வேறுபாடற்ற நிலையில் பூஜை அர்ச்சனை
பேரமைதியுற்று இணையும் நோட்டம்
வாயுவின் சலனமற்ற இலிங்க நிலையைக்
காட்டுவாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಎವೆ ತಾಗದ = ನಿಶ್ಚಲಾದ ಅನುಸಂಧಾನವು; ಠಾವು = ತಾಣವು ಸಹಸ್ರಾರ ಮಂಡಲವು; ತನು ತಾಗದ = ದೇಹಾತ್ಮ ಭಾವವಿಲ್ಲದ(ಇರುವಿಕೆಯು); ತಾಗದ = ಸ್ಪಂದನವಿಲ್ಲದ; ದೇಹಾರ = ನೈವೇದ್ಯ; ನೋಟ = ದೃಷ್ಟಿಯೋಗ; ಪೂಜೆ = ಸಮರ್ಪಣಕ್ರಿಯೆಯು; ಭಾವ ತಾಗದ = ಭೇಧಬುದ್ದಿ ಇಲ್ಲದ(ಇರುವಿಕೆಯು); ಮಜ್ಜನ = ಆ ಜ್ಞಾನಲಿಂಗಕ್ಕೆ ಅಭಿಷೇಕ; ಮನ ಮುಟ್ಟದ = ಸಂಕಲ್ಪ-ವಿಕಲ್ಪಗಳಳಿದ ಅ-ಮನ, ನಿಸ್ತರಂಗ ಚಿತ್ತ; ಲಿಂಗದ ಠಾವು = ಅದುವೆ ಜ್ಞಾನಲಿಂಗದ ನೆಲೆ.; ವಾಯು = ಪ್ರಾಣ;
Written by: Sri Siddeswara Swamiji, Vijayapura