•  
  •  
  •  
  •  
Index   ವಚನ - 418    Search  
 
ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ. ಮತ್ತೆ ದೇವರ ಪೂಜಿಸುವರಾರೂ ಇಲ್ಲ. ಉತ್ತರಾಪಥದ ದಶನಾಡಿಗಳಿಗೆ, ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು? ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ! ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು.
Transliteration Aragina dēguladalli ondu uriya liṅgava kaṇḍe. Matte dēvara pūjisuvarārū illa. Uttarāpathada daśanāḍigaḷige, suttimuttida māye ettalike hōyittu? Maranoḷagaṇa kiccu marana suṭṭuda kaṇḍe! Guhēśvaranemba liṅga alliye nindittu.
Hindi Translation लाक्षा देगुल में एक ज्ञान लिंग देखा। और देव की पूजा करनेवाला कोई नहीं। उत्तर पथ दर्शनार्थियों को चारों ओर लगी माया कहीं उडगयी। पेड की अग्नि पेड जलाये देखा। गुहेश्वर नामक लिंग वही स्थिर था। Translated by: Eswara Sharma M and Govindarao B N
Tamil Translation அரக்குக் கோயிலிலே ஒளிரும் இலிங்கத்தைக் கண்டேன் அதன்பிறகு இறைவனைப் பூஜிப்பவர் எவருமிலை சிவவழியில் செல்வோரைச் சூழ்ந்திருந்த மாயை எங்கோ சென்று மறைந்து விட்டது. மரத்திலுள்ள தீ மரத்தைச் சுட்டதைக் கண்டேன். குஹேசுவரனெனும் இலிங்கம் அங்கேயே நிலைத்தது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಗಿನ ದೇಗುಲ = ಅರಗಿನಂತೆ ಕರಗಿ ಹೋಗುವ ದೇವಾಲಯ, ನಶ್ವರವಾದ ದೇಹ, ; ಆರೂ ಇಲ್ಲ = ಈ ಜಗತ್ತಿನಲ್ಲಿ ಅತಿ ವಿರಳ; ಉತ್ತರ ಪಥ = ಜ್ಞಾನಪಥ, ಶಿವಪಥ, ಭವಮುಕ್ತಿಯ ಮಾರ್ಗ; ಉರಿಯ ಲಿಂಗ = ಅರಿವಿನ ಲಿಂಗ, ಜಡಭಾವವಿನಾಶಕವಾದ ಚೇತನಲಿಂಗ; ಎತ್ತಲಿಕೆ ಹೋಯಿತ್ತು = ಎಲ್ಲೋ ಹಾರಿಹೋಯಿತು, ಇಲ್ಲದಾಯಿತು.; ಕಂಡೆ = ಅನುಭವಿಸಿದೆ; ದರ್ಶನಾದಿಗಳು = ಕಾಣುವುದು, ಅನುಸಂಧಾನಿಸುವುದು ಹಾಗೂ ಕೂಡುವುದು; ದೇವರ = ಆ ದೇವನನ್ನು; ಪೂಜಿಸುವವರು = "ಅವನೇ ನಾನು" ಎಂದು ಅಭಿನ್ನಭಾವದಿಂದ ಅರ್ಚಿಸುವವರು; ಮತ್ತೆ = ಈ ಅಂತಸ್ಥದೇವನನು ಗುರುತಿಸಿ, ಬಳಿಕ; ಮರನ ಸುಡುವುದು = ಆ ಮರವನ್ನೇ ಸುಟ್ಟು ಹಾಕುತ್ತದೆ. ಹಾಗೆ ದೇಹವೆಂಬ ಮರದೊಳಗಿರುವ ಶಿವಜ್ಞಾನವೆಂಬ ಕಿಚ್ಚು ಆ ದೇಹದ ಭಾವವನ್ನೆ ನಷ್ಟಗೊಳಿಸುತ; ಮರನೊಳಗಣ ಕಿಚ್ಚು = ಮರದೊಳಗೆ ಅಡಗಿ ನಿಂತಿರುವ ಅಗ್ನಿ; ಲಿಂಗವು ಅಲ್ಲಿಯೆ ನಿಂ = ಆ ಜ್ಞಾನ ಲಿಂಗವು ತನ್ನ ನಿಜಸ್ಥಿತಿಯಲ್ಲಿಯೆ ನೆಲೆಸಿತ್ತು.; ಸುಟ್ಟುದ = ಹಾಗೆ ನಷ್ಟವಾದುದನ್ನು; ಸುತ್ತಿ ಮುತ್ತಿದ ಮಾಯ = ದೇಹ, ಇಂದ್ರಿಯ, ಮನ, ಬುದ್ದಿಗಳನ್ನೆಲ್ಲ ಸುತ್ತಿ ಗಾಢವಾಗಿ ಮೆತ್ತಿಕೊಂಡ ಮಾಯೆ; ನಾನು ದೇಹಿ, ಸಂಸಾರಿ, ಭವಬಂಧಿತ ಎಂಬ ಭಾ; Written by: Sri Siddeswara Swamiji, Vijayapura