ಒಂದೆ ಹೂ, ಒಂದೆ ಅಗ್ಘವಣಿ, ಒಂದೆ ಓಗರ,
ಒಂದೆ ಪ್ರಸಾದ, ಒಂದೆ ಮನ, ಒಂದೆ ಲಿಂಗ.
ಒಂದೇ ನಂದಾದೀವಿಗೆ, ಕುಂದದ ಬೆಳಗು;
ಸ್ವತಂತ್ರ ಪೂಜೆ ಒಂದೇ.
ಅನಾಹತವೆರಡಾಗಿ ಬರುಮುಖರಾಗಿ
ಕೆಟ್ಟುಹೋದರು ಗುಹೇಶ್ವರಾ.
Art
Manuscript
Music Courtesy:
Video
TransliterationOnde hū, onde agghavaṇi, onde ōgara,
onde prasāda, onde mana, onde liṅga.
Ondē nandādīvige, kundada beḷagu;
svatantra pūje ondē.
Anāhataveraḍāgi barumukharāgi
keṭṭuhōdaru guhēśvarā.
Hindi Translationएक ही फूल ,एक ही पवित्र जल , एक ही नैवेद्य, एक ही प्रसाद ;
एक ही मन ,एक ही लिंग।
नंदादीप न क्षीण होनेवाली ज्योति स्वतंत्र पूजा एक।
अनाहत दो होकर अप्रयोजक बनकर
बिगड गये गुहेश्वरा।
Translated by: Eswara Sharma M and Govindarao B N
English Translation
Tamil Translationஒரே ஒரு பூ, ஒரே ஒரு திருமஞ்சனம், ஒரே ஒரு படையல்
ஒரே ஒரு பிரசாதம், ஒரே ஒரு மனம், ஒரே ஒரு இலிங்கம்
அணையா விளக்குடன் கூடிய அகத்திலே நடைபெறும் பூஜை ஒன்றே
அபேத ஞானம், பேதமுற்று, பயனற்று மீண்டனர்
மீண்டும் பிறவி எய்தினர் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಗ್ಘವಣಿ = ಅಭಿಷೇಕ ಜಲ; ಅನಾಹತವು = ಅಖಂಡವಾದ ಭಾವವು, ಎಲ್ಲವೂ ದೇವನೆಂಬ ಅಭೇಧಜ್ಞಾನವು; ಎರಡಾಗಿ = ಖಂಡಿತವಾಗಿ, ಭಿನ್ನಭಿನ್ನವಾಗಿ(ಹೋದುದರಿಂದ); ಒಂದೆ = ಈ ಎಲ್ಲವೂ ಒಂದೆ; ಓಗರ = ಅರ್ಪಿಸಬೇಕಾದ ಪದಾರ್ಥ; ಕುಂದದ ಬೆಳಗು = ಜಾಜ್ವಲಿಸುವ ಪ್ರಕಾಶ; ಕೆಟ್ಟುಹೋದರು = ಭೇಧರೂಪ ಭವಕ್ಕೆ ಒಳಗಾದರು; ನಂದಾದೀವಿಗೆ = ನಿರಂತರ ಉರಿವ ದೀಪ; ಪ್ರಸಾದ = ಅರ್ಪಿತ ಓಗರ; ಬರುಮುಖರಾಗಿ = ಅಪ್ರಯೋಜಕರಾಗಿ, ಧ್ಯೇಯಚ್ಯುತರಾಗಿ; ಮನ = ಧ್ಯಾನಕರಣ; ಲಿಂಗ = ಪೂಜ್ಯವಸ್ತು; ಸ್ವತಂತ್ರಪೂಜೆ = ತನ್ನಂತರಂಗದಲ್ಲಿ ನಡೆವ ಅರ್ಚನೆ; ಹೂ = ಲಿಂಗಕ್ಕೆ ಅರ್ಪಿಸಬೇಕಾದ ಪುಷ್ಪ; Written by: Sri Siddeswara Swamiji, Vijayapura