ಮಜ್ಜನಕ್ಕೆರೆವಡೆ,
ನೀನು ಶುದ್ಧ ನಿರ್ಮಲದೇಹಿ.
ಪೂಜೆಯ ಮಾಡುವಡೆ,
ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ.
ಧೂಪದೀಪಾರತಿಗಳ ಬೆಳಗುವಡೆ,
ನೀನು ಸ್ವಯಂ ಜ್ಯೋತಿಪ್ರಕಾಶನು.
ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಗಳ ಮಾಡುವಡೆ,
ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಗಳ ಮಾಡುವಡೆ;
ನಿನಗೆ ಅನಂತನಾಮಂಗಳಾದವು ಗುಹೇಶ್ವರಾ.
Hindi Translationमज्जन करना चाहे तो तुम स्वयं निर्मल देही।
पूजा करना चाहे तो तुम्हें गगन कमल कुसुम की अखंडित पूजा।
धूपदीपारति करना चाहे तो तुम स्वयं ज्योति प्रकाश।
अर्पित करना चाहे तो तुम स्वयं नित्यतृप्त।
अष्टविधार्चन करना चाहे तो तुम न छूनेवाले घन वेद्य।
नित्य नेम करना चाहे तो तुम्हें अनंत नाम गुहेश्वरा!
Translated by: Eswara Sharma M and Govindarao B N
English Translation
Tamil Translationதிருமஞ்சனம் செய்ய விழையின் நீ மிகத் தூயவன்
பூஜை செய்ய விழையின் உனக்கு ஆகாயமெனும்
தாமரையின் இடையறாத பூஜையாம்
தூபம், தீபம், ஆரதியைக் காட்டும் பொழுது நீ
பேரொளி வடிவினனாகத் திகழ்கிறாய்
படையலைப் படைப்பின் நீ நிறைவுடையவனன்றோ
எண்வித அர்ச்சனையைச் செயின் நீ எட்டாத மகிமையோன்
ஒரு பெயரினால் நியமங்களை ஆற்ற விழையின்
குஹேசுவரனே, உனக்கு எண்ணமற்ற பெயர்களன்றோ!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಖಂಡಿತ ಪೂಜೆ = ನಿರಂತರ ಪೂಜೆ ಸಾಗಿದೆ; ಅನಂತ ನಾಮಂಗಳಾದವು = ನಿನ್ನ ನಾಮಗಳು ಅಸಂಖ್ಯ, ಅಷ್ಟೇ ಏಕೆ ನಾಮ-ರೂಪಗಳೇ ನಿನಗಿಲ್ಲ; ಅರ್ಪಿತವ ಮಾಡುವಡೆ = ನೈವೇದ್ಯವನು ಅರ್ಪಿಸಬೇಕೆಂದರೆ; ಅಷ್ಟವಿಧಾರ್ಚನೆಯ ಮಾಡ = ಜಲಾಭಿಷೇಕ, ಗಂಧಧಾರಣ, ಅಕ್ಷತಾರ್ಪಣ, ಪತ್ರಪುಷ್ಪಾರ್ಪಣ, ಧೂಪಸಮರ್ಪಣ, ದೀಪಸಮರ್ಪಣ,
ನೈವೇದ್ಯ ಸಮರ್ಪಣ ಹಾಗೂ ತಾಂಬೂಲ ಸಮರ; ಗಗನಕಮಲಕುಸುಮದ = ಗಗನವೆಂಬ ಕಮಲಪುಷ್ಪದ; ಧೂಪದೀಪಾರತಿಗಳ ಬೆಳಗು = ಧೂಪ ಮತ್ತು ದೀಪಾರತಿಗಳನ್ನು ಬೆಳಗಬೇಕೆಂದರೆ; ನಿತ್ಯತೃಪ್ತನು = ಸದಾ ಸಂತೃಪ್ತನು, ಪೂರ್ಣಕಾಮನು; ನಿತ್ಯನೇಮಂಗಳ ಮಾಡುವಡ = ನಿನ್ನ ಒಂದು ನಾಮವಿಡಿದು ನಿತ್ಯ ನೆನೆವ ನೇಮವನು ಮಾಡಬೇಕೆಂದರೆ; ನಿನಗೆ = ಪರಮಾತ್ಮನಾದ ನಿನಗೆ; ನೀನು = ಪರಮಾತ್ಮನಾದ ನೀನು; ಪೂಜೆಯ ಮಾಡುವಡೆ = ಪುಷ್ಪಪೂಜೆಯ ಮಾಡಬೇಕೆಂದರೆ; ಮಜ್ಜನಕ್ಕೆರೆವಡೆ = ಮಜ್ಜನಕ್ಕೆ ಎರಯಬೇಕೆಂದರೆ.; ಮುಟ್ಟಬಾರದ ಘನವೇದ್ಯನ = ಮುಟ್ಟಲಿಕ್ಕಾಗದ ಘನಮಹಿಮನು, ಯಾವ ಉಪಚಾರಗಳಿಂದಲೂ ನಿನ್ನನ್ನು ಸ್ಪರ್ಶಿಸಲು ಆಗದು; ಶುದ್ದ ನಿರ್ಮಲ ದೇಹಿ = ಅತ್ಯಂತ ಶುದ್ದವಾದ ಚೇತನ; ಸ್ವಯಂಜ್ಯೋತಿಪ್ರಕಾಶನ = ಸ್ವತಹ ಪರಂಜ್ಯೋತಿಸ್ವರೂಪನು; Written by: Sri Siddeswara Swamiji, Vijayapura