ಮಲಿನ ದೇಹಕ್ಕೆ ಮಜ್ಜನವಲ್ಲದೆ,
ನಿರ್ಮಲದೇಹಕ್ಕೆ ಮಜ್ಜನವೇಕೊ? ಉಂಟೆ
ವಿಷಯ ಲಿಂಗ ನಿಷ್ಪತಿಯಾದ ಶರಣಂಗೆ?
ಅಗಮ್ಯ ಅಗೋಚರ ಅಪ್ರಮಾಣ
ಗುಹೇಶ್ವರಾ ನಿಮ್ಮ ಶರಣ.
Transliteration Malina dēhakke majjanavallade,
nirmaladēhakke majjanavēko? Uṇṭe
viṣaya liṅga niṣpatiyāda śaraṇaṅge?
Agamya agōcara apramāṇa
guhēśvarā nim'ma śaraṇa.
Hindi Translation मलिन देही मज्जन करें तो
निर्मल देही को मज्जन क्यों ?
लिंग निष्पत्ति शरण को क्या विषय वासनाएँ हैं ?
अगम्य अगोचर अप्रमाण गुहेश्वर, तुम्हारा शरण!
Translated by: Eswara Sharma M and Govindarao B N
Tamil Translation தூய்மையற்றோன் திருமஞ்சனம் செய்வானன்றி
தூய்மையே உருவானவனுக்கு திருமஞ்சனம் எதற்கோ?
இலிங்க நியமமுள்ள சரணனுக்கு விஷயமோகம் உண்டோ?
குஹேசுவரனே, உம் சரணன் அறிவிற்கும், புலனிற்கும்
எட்டாதவன், அளக்கவியலாதவனன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗಮ್ಯ = ಭೇದಾವಲಂಬಿಯಾದ ಬುದ್ದಿಗೆ ನಿಲುಕದವ; ಅಗೋಚರ = ಶಬ್ದಾದಿಗಳ ಗ್ರಹಿಸುವ ಇಂದ್ರಿಯಂಗಳಿಗೆ ಗೋಚರಿಸದವ; ಅಪ್ರಮಾಣ = ವಾಙ್ಮನಸ್ಸುಗಳ ಅಳವಿಗೆ ಸಿಲುಕದವ; ನಿಮ್ಮ ಶರಣ = ಗುಹೇಶ್ವರನೆಂಬ ನಿಷ್ಕಲಲಿಂಗದಲಿ ಐಕ್ಯವನೈದ ಶರಣ; ನಿರ್ಮಲದೇಹಿಗೆ = ಭೇದಬುದ್ದಿಯ ಕಳೆದುಕೊಂಡು ನಿರ್ಮಲವಾದ ಅಮನಸ್ಕ ಮಹಾನುಭಾವನಿಗೆ; ಮಜ್ಜನಕ್ಕೆರೆವನು = ಮಜ್ಜನಾದಿ ಉಪಚಾರಗಳಿಂದ ಲಿಂಗಪೂಜೆಯನು ಮಾಡುತ್ತಾನೆ, ಮಾಡಬೇಕು; ಮಜ್ಜನವೇಕೊ? = ಮಜ್ಜನಾದಿಗಳಿಂದ ಕೂಡಿದ ಅರ್ಚನೆಯ ಅವಶ್ಯಕತೆ ಇರದು; ಅರ್ಚನೆಗೆ ಅವನಲ್ಲಿ ಅವಕಾಶವಿಲ್ಲ; ಮಲಿನ ದೇಹಿ = ಮಲಿನ ಮನವುಳ್ಳ ಜೀವ, ಲಿಂಗ-ಅಂಗ ಬೇರೆ ಎಂಬ ಭೇಧಭಾವ ಮಾಲಿನ್ಯವುಳ್ಳ ಸಾಧಕ; ಲಿಂಗನಿಷ್ಪತಿಯಾದ = ಲಿಂಗದೊಡನೆ ಒಂದಾದ; ವಿಷಯವುಂಟೆ? = ವಿಷಯವ್ಯಾಮೋಹವೆಂಬ ಮಾಲಿನ್ಯ ಉಂಟೆ?; ಶರಣಂಗೆ = ಶರಣಸ್ಥಲಿಗೆ;
Written by: Sri Siddeswara Swamiji, Vijayapura